ಬೀದಿ ಬದಿ ವ್ಯಾಪಾರಿಗಳು ಮಹಾಪೌರರಿಗೆ ತಮಗೂ ಫುಡ್ ಕಿಟ್ ವಿತರಿಸುವಂತೆ ಮನವಿ ನೀಡಿದರು . ಕೋವಿಡ 19 ಸಾಂಕ್ರಾಮಿಕ ರೋಗ ಉಲ್ಬಣಗೊಂಡಿರುವುದರಿಂದ ಯಾವುದೇ ಅಂಗಡಿ , ಹೋಟೆಲ್ ಮತ್ತಿತರ ಯಾವುದೇ ತರಹದ ಆಹಾರದ ಅಂಗಡಿಗಳನ್ನು ಮುಚ್ಚಿರುವುದರಿಂದ ಈ ಕಾರಣದಿಂದಾಗಿ ಬೀದಿಬದಿ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ಕಂಗೆಟ್ಟಿರುತ್ತಾರೆ .ಹಾಲು ದಿನಸಿ ತರಕಾರಿ ಮಾಂಸ ಔಷಧಿ ಹಾಗೂ ಮದ್ಯಪಾನಕ್ಕೂ ಅವಕಾಶವಿದೆ ಆದರೆ ದುಡಿದು ತಿನ್ನುವ ಬೀದಿಬದಿ ವ್ಯಾಪಾರಿಗಳಿಗೆ ಇವುಗಳ ಕೊಂಡು ತಿನ್ನಲು ದುಡಿಮೆಯು ಇಲ್ಲ ಜೊತೆಗೆ ಹಣವೂ ಇಲ್ಲ ಕೆಲವರಂತೂ ಇಂದಿರಾ ಕ್ಯಾಂಟೀನ್ ಹಾಗೂ ದಾನಿಗಳು ನೀಡುವ ಆಹಾರದ ಸಹಾಯಹಸ್ತವನ್ನು ಅವಲಂಬಿಸಿರುವರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿ ಸಂಘದ ಜಿಲ್ಲಾಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ. ನಾರಾಯಣ M S , ಶೇಷಯ್ಯ B, ಇರ್ಫಾನ್ ಪಾಶಾ , ಮಹಮ್ಮದ್ ಇಸ್ಮಾಯಿಲ್ , ಪರುಶರಾಮ , ಗೋಪಾಲ E, ಕೇಶವಮೂರ್ತಿ B , ಮಂಜುನಾಥ ಜಿ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ