ಇಂದು ಶಿವಮೊಗ್ಗ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ಜಿಲ್ಲಾ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುಣ್ಯ ಸ್ಮರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ದಲಿತರು ಮೂಢನಂಬಿಕೆಗೆ ಬಲಿಯಾಗದೆ ಅಂಬೇಡ್ಕರ್ ಅವರು ಸಂವಿಧಾನದಿಂದ ಒದಗಿಸಿಕೊಟ್ಟ ಸವಲತ್ತುಗಳು ಪಡೆದು ತಮ್ಮ ಕುಟುಂಬದ ಏಳ್ಗೆಗೆ ಶ್ರಮಿಸ ಬೇಕೆ ಹೊರತು ಮೌಢ್ಯಾಚರಣೆ ಸಲ್ಲದು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಮತ್ತೊರ್ವ ಮುಖ್ಯ ಅತಿಥಿಗಳಾದ ವಕೀಲ ಕೆ.ಸಿ. ಮಂಜುನಾಥ್ ಅವರು ಮಾತನಾಡಿ ಇಲ್ಲಿಗೆ ಆಗಮಿಸಿದ ಮುಖಂಡರು ತಮ್ಮ ಹಳ್ಳಿಗಳಲ್ಲಿ, ಮುಗ್ಧ ಜನರನ್ನು ಒಳ್ಳೆಯ ಸನ್ನಡತೆಗೆ ತರಬೇಕಾದರೆ ತಾವುಗಳು ಮೊದಲು ಜಾಗೃತರಾಗಬೇಕು. ಎಂದು ತಮ್ಮ ಅನುಭವ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಂಚಾಲಕರಾದ ಟಿ.ಹೆಚ್.ಹಾಲೇಶಪ್ಪನವರು ಮಾತನಾಡಿ, ಅವರು ದಲಿತ ಯುವಕರು ಹಾಗೂ ಯುವತಿಯರು ಭವಿಷ್ಯದ ಬಗ್ಗೆ ನಿರ್ಧಾರ ಮಾಡದೆ ಬರಿ ಆಧುನಿಕ ತಂತ್ರಜ್ಞಾನವಾದ ಮೊಬೈಲ್, ಬೈಕ್, ಟಿವಿ ಅಂತಹ ಮೋಹದ ಗೀಳಿಗೆ ಬಿದ್ದು ತಮ್ಮ ಬದುಕಿನ ಉತ್ತಮ ಸಮಯವನ್ನು ಹಾಳುಗೆಡವಿ ಸಮಾಜಕ್ಕೆ ಕಂಟಕವಾಗಿದ್ದಾರೆ ಎಂದು ವಿಷಾದಿಸಿದರು.
ಇಂತಹ ಕಾರ್ಯಕ್ರಮಗಳಲ್ಲಿ ದಲಿತ ಕಾರ್ಯಕರ್ತರು ಭಾಗವಹಿಸಿ ಅಂಬೇಡ್ಕರ್ ಅವರ ವಿಚಾರಗಳನ್ನು ತಿಳಿದುಕೊಳ್ಳಬಹುದು. ಇದರಿಂದ ತಮ್ಮ ಕುಟುಂಬ ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿ ಕೊಂಡು ತಳಸಮುದಾಯಗಳಿಗೆ ಆಶಾಕಿರಣಗಳಾಗಿ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಘಟನೆಯ ಮುಖಂಡರಾದ ಸ್ಪಂದನ ಚಂದ್ರು ಮಂಜುನಾಥ್, ಆನಂದಪ್ಪ, ಶಿವಕುಮಾರ ಆಸ್ತಿ, ರುದ್ರಮ್ಮ ಮಾಚೇನಹಳ್ಳಿ, ಜಗದೀಶ್, ಸೂಗೂರು ಪರಮೇಶ್ ಕಾಶಿಪುರ ಗೋವಿಂದ್, ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…