ಧಾರವಾಡ ನ್ಯೂಸ್…

ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಕರೋನಾ ಟಾಸ್ಕ್ ಫೋರ್ಸ್ ಕಮಿಟಿಯ ವತಿಯಿಂದ ತುರ್ತು ಸಭೆ ಮಾಡಲಾಯಿತು ಈ ಸಂದರ್ಭದಲ್ಲಿ ಟಾಸ್ಕ್ ಫೋರ್ಸ್ ಕಮಿಟಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ರಡ್ಡೇರ ಮಾತನಾಡಿ ಅತಿ ವೇಗವಾಗಿ ಒಮಿಕ್ರಾನ್ ರೂಪಾಂತರಿ ವೈರಸ್ ನಿಂದ ಕೋವಿಡ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಾಪೂರ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಸರ್ಕಾರಿ ಸಾರಿಗೆ ಬಸ್ ಗೆ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸ್ಯಾನಿಟೈಜೆಶನ್ ಮಾಡಲಾಗಿದ್ದು ಸಭೆಯಲ್ಲಿ ದಿನ ದಿನಕ್ಕೆ ಹೆಚ್ಚುತ್ತಿರುವ ಒಮಿಕ್ರಾನ್ ರೂಪಾಂತರಿ ವೈರಸ್ ನಿಂದ ಕೋವಿಡ್ ಸೋಂಕು ತಡೆಗಟ್ಟಲು ಶಾಲಾ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

ಶಾಲೆ ಅಂಗನವಾಡಿ ಆವರಣದಲ್ಲಿ ಬೇರೆ ಕಡೆಯಿಂದ ಬರುವ ಹೊರಗಿನವರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಶಾಲಾ ಮಕ್ಕಳ ಪಾಲಕರು ಕೊರೋನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆದು ಕೊಳ್ಳಬೇಕು ಮಕ್ಕಳಿಗೆ ಆರೋಗ್ಯದಲ್ಲಿ ಏನಾದರೂ ಏರು ಪೇರು ಆದರೆ ಪಾಲಕರಿಗೆ ಮತ್ತು ಟಾಸ್ಕ್ ಫೋರ್ಸ್ ಕಮಿಟಿಯ ಅವರಿಗೆ ತಿಳಿಸಬೇಕು ಶಾಲೆ ಅಂಗನವಾಡಿಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಲು ತಿಳಿಸಲಾಗಿತ್ತು ಸರ್ಕಾರದ ಆದೇಶವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಯಿತು. ಒಮಿಕ್ರಾನ್ ರೂಪಾಂತರಿ ವೈರಸ್ ನಿಂದ ಕೋವಿಡ್ ಸೋಂಕು ತಡೆಗಟ್ಟಲು ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಯಿತು ಈ ಸಭೆಯಲ್ಲಿ ಟಾಸ್ಕ್ ಫೋರ್ಸ್ ಕಮಿಟಿಯ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾಂದ ಶಿಲ್ಪಾ ಎಚ್.ಸರ್ಕಾರಿ ಕಿರಿಯ ಪ್ರಾಮಿಕ ಶಾಲೆಯ.ಮುಖ್ಯೋಪಾಧ್ಯಾಯರಾದ ಜಾನಕಿ ಉಪಾಧ್ಯಯ. ಅಂಗನವಾಡಿ.ಕಾರ್ಯಕರ್ತೆರಾದ ಶಂಕ್ರಮ್ಮ ಶೆರೆವಾಡ ದೇವಕ್ಕ ಬದ್ರಾಪುರ ಇನ್ನು ಹಲವಾರು ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ…