ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಬೆಂಗಳೂರು ಇಲ್ಲಿಗೆ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಪ್ರಭಾಕರ್ ಇವರನ್ನು ಅಭಿನಂದಿಸುತ್ತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿಯವರು ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ-ವಿರೋಧಗಳು,ಸಂಘರ್ಷಗಳು ಸರ್ವೇಸಾಮಾನ್ಯ.ಈ ಸಂಘರ್ಷ ಆರೋಗ್ಯಕರವಾಗಿರಬೇಕು ಮತ್ತು ಚುನಾವಣೆಗೇ ಕೊನೆಯಾಗಬೇಕು. ಆಯ್ಕೆಯಾದವರು ನೌಕರ ಒಳಿತಿಗಾಗಿ ಕೆಲಸ ಮಾಡಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ದೊರೆತ ಅಮೂಲ್ಯ ಅವಕಾಶವನ್ನು,ಅಧಿಕಾರವನ್ನು ದ್ವೇಷ ಸಾಧನವಾಗಿ ಬಳಸದೇ,ಸದಾ ನೌಕರ ಸಂಘದ ಅಭಿವೃದ್ಧಿಗೆ ,ನೌಕರರ ಅಭ್ಯುದಯಕ್ಕೆ ದುಡಿವ ಯಂತ್ರವಾಗಿಸಿಕೊಳ್ಳಬೇಕು.ನಮ್ಮ ರಾಜ್ಯ ಸರ್ಕಾರಿ ನೌಕರ ಸಂಘಟನೆ ದೇಶದಲ್ಲೇ ಅತ್ಯುತ್ತಮ ಮೂಲಸೌಕರ್ಯ,ಬೃಹತ್ ಸಂಪನ್ಮೂಲ ವ್ಯವಸ್ಥೆ ಹೊಂದಿದ್ದು, ಅದಕ್ಕೆ ಕಾರಣ ಸರ್ಕಾರದೊಡನೆ ನಮಗಿರುವ ಸಂಪರ್ಕ,ನೌಕರರ ಮೇಲೆ ಸರ್ಕಾರಕ್ಕಿರುವ ಖಾಳಜಿ.

ಯೋಜನೆಯಿಂದ ಸರ್ಕಾರಿ ನೌಕರರ ಮತ್ತು ಅವಲಂಬಿತ ಕುಟುಂಬದ ಎಲ್ಲ ಸದಸ್ಯರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ದೊರೆಯುತ್ತದೆ,ಆರ್ಥಿಕ ಹೊರೆ ತಗ್ಗುತ್ತದೆ.ನಮ್ಮ ಮುಂದಿನ ಹೋರಾಟ ನೌಕರರಿಗೆ ಕಾಲಿಕ ಮುಂಬಡ್ತಿ,ಬಡ್ತಿಗೆ ತಕ್ಕ ವೇತನ ಶ್ರೇಣಿ ಪಡೆಯುವುದು.ನಾವು ನಮ್ಮ ಬೆನ್ನ ಹಿಂದೆ ಆಡಿಕೊಳ್ಳುವವರ ಹಿತಶತ್ರುಗಳ ಬಗ್ಗೆ ಚಿಂತಿಸದೇ ಜನರ ಹಿತಕ್ಕಾಗಿ ಸರ್ಕಾರದ ಜೊತೆ ಕೈಜೋಡಿಸಿ ದುಡಿವ ನೌಕರ ವರ್ಗದ ಕಾಳಜಿಯ ಬಗ್ಗೆ ಚಿಂತಿಸಬೇಕು. *ಹಣದ ದಾಹದಿಂದ ಅಧಿಕಾರದ ಹಿಂದೆ ಹೋದರೆ ತಿರಸ್ಕರಿಸಲ್ಪಡುತ್ತೇವೆ,ಜನಹಿತಕ್ಕಾಗಿ ನೌಕರರ ಏಳ್ಗೆಗಾಗಿ ಜನರ ಮುಂದೆ ಬಂದರೆ ಪುರಸ್ಕರಿಸಲ್ಪಡುತ್ತೇವೆ.

ರಾಜ್ಯ ಫಾರ್ಮಸಿ ಅಧಿಕಾರಿಗಳ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ದೇಸಾಯಿಯವರು ಫಾರ್ಮಸಿ ಅಧಿಕಾರಿಗಳ ಅಭ್ಯುದಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ನೂತನ ಅಧ್ಯಕ್ಷರಾದ ಪ್ರಭಾಕರ್ ಅವರು ನಮ್ಮ ಜಿಲ್ಲೆಯವರೇ ಆಗಿದ್ದು ತುಂಬಾ ವರ್ಷಗಳಿಂದ ನಮಗೆ ಆತ್ಮೀಯರಾಗಿದ್ದಾರೆ.ಅವರು ಸುಮ್ಮನೆ ಕೂರುವ ಮನುಷ್ಯನೇ ಅಲ್ಲ.ಸದಾ ಏನಾದರೊಂದು ಬೇಡಿಕೆಯನ್ನು ಹೊತ್ತು ತರುತ್ತಾರೆ. ಆದ್ಯಾನುಸಾರ ನಿಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ನಿಮ್ಮ ಜೊತೆ ಕೈಜೋಡಿಸುತ್ತೇನೆ” ಎಂದರು‌.

ಜಿಲ್ಲಾ ಫಾರ್ಮಸಿ ಅಧಿಕಾರಿಗಳ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವೈ.ಮೋಹನ್ ಅವರು, “ಇತಿಹಾಸದಲ್ಲಿ ನಮ್ಮ ಸಂಘಕ್ಕೆ ಚುನಾವಣೆ ನಡೆದಿರಲಿಲ್ಲ.ಚುನಾವಣಾ ಸಂಘರ್ಷದ ಮೂಲಕವೇ ಜಿಲ್ಲೆ ಹಾಗೂ ರಾಜ್ಯ ಸಂಘದ ಅದ್ಯಕ್ಷರಾಗಿ ಪ್ರಭಾಕರ್ ಅವರು ಆಯ್ಕೆಯಾಗಿದ್ದು ವಿಶೇಷವಾದರೂ..
ಅದ್ಯಕ್ಷ ಗಾದೆ ಸುಖದ ಸುಪ್ಪತ್ತಿಗೆಯಲ್ಲ,ಯಾರ ಮೇಲೂ ದ್ವೇಷ ಸಾಧಿಸದೇ,ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಮೂಲಕ ಪ್ರಭಾಕರ್ ನಮ್ಮ ಜಿಲ್ಲೆಗೆ ಕೀರ್ತಿ ತರಲಿ” ಎಂದರು.
ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷರಾದ ಶ್ರೀ ಮೋಹನ್ ರವರು ಫಾರ್ಮಸಿ ಅಧಿಕಾರಿಗಳ ಸಂಘವು ಒಗ್ಗಟ್ಟಿಗೆ ಶಿಸ್ತಿಗೆ ಹೆಸರಾದ ಸಂಘಟನೆಯಾಗಿದ್ದು ಪ್ರಭಾಕರ್ ಅವರ ಅಧ್ಯಕ್ಷತೆಯಲ್ಲಿ ಮತ್ತಷ್ಟು ಬಲಶಾಲಿ ಆಗಲಿ,ನಿಮ್ಮೆಲ್ಲರ ಆಶೋತ್ತರಗಳು ಈಡೇರಲಿ ಎಂದು ಹಾರೈಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಶಡಕ್ಷರಿ ಅವರಿಂದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ವಿ ಪ್ರಭಾಕರ್ ಇಂದು ನಾನು ರಾಜ್ಯ ಸಂಘದ ಅಧ್ಯಕ್ಷನಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರೆ ಅದಕ್ಕೆ ಮೂರು ಪ್ರಮುಖ ಕಾರಣಗಳು,ಮೊದಲನೆಯದಾಗಿ ತುಮಕೂರು ಶ್ರೀ ಸಿದ್ದಗಂಗಾ ಶ್ರೀಗಳ ಆಶೀರ್ವಾದ, ಎರಡನೆಯದಾಗಿ ಹಿಡಿದ ಕೆಲಸಗಳನ್ನು ಪಟ್ಟು ಬಿಡದೆ ಸಾಧಿಸುವ ಸಾಮ್ರಾಟ್ ಷಡಕ್ಷರಿ ಅವರ ಪರೋಕ್ಷ ಸಹಕಾರ ಹಾಗೂ ಮೂರನೆಯದಾಗಿ ,ಹಿರಿಯರಾದ ಶಾಂತಣ್ಣನವರ ಮಾರ್ಗದರ್ಶನ, ನಿಮ್ಮೆಲ್ಲರ ಅಭಿಮಾನ ಹಾಗೂ ಒತ್ತಾಸೆ.

ನಮ್ಮ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ದೇಸಾಯಿಯವರ ಸತತ ಹೋರಾಟದ ಫಲವಾಗಿ ಫಾರ್ಮಸಿ ಅಧಿಕಾರಿಗಳಿಗೆ ಸೇವಾ ಹಿರಿತನದ ಆಧಾರದ ಮೇಲೆ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಫಾರ್ಮಸಿ ಮುಂಬಡ್ತಿ ನೀಡಬೇಕೆಂಬ ಬೇಡಿಕೆ ಇನ್ನು ಕೆಲವೇ ದಿನಗಳಲ್ಲಿ ಸಾಕಾರಗೊಳ್ಳುತ್ತದೆ.ಈ ಎಲ್ಲಾ ಹಿರಿಯರ ಜೊತೆ ಸಂಪರ್ಕದಲ್ಲಿದ್ದು ಅವರ ಮಾರ್ಗದರ್ಶನ ಸಲಹೆ ಸಹಕಾರದೊಂದಿಗೆ ನಮ್ಮ ಫಾರ್ಮಸಿ ವೃಂದದ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ ಹೋರಾಟವನ್ನು ಮಾಡುತ್ತೇನೆ ಎಂದು ಹೇಳಿದರು.

ವೇದಿಕೆಯಲ್ಲಿ ಹಿರಿಯ ಫಾರ್ಮಸಿ ಅಧಿಕಾರಿ ಸತ್ಯನ್ ದೇವ್, ರಾಜ್ಯ ಸರ್ಕಾರಿ ನೌಕರ ಜಿಲ್ಲಾ ಸಂಘದ ಪದಾಧಿಕಾರಿಗಳಾದ ಶ್ರೀ ಲಕ್ಷ್ಮಣ್, ರಾಜ್ಯ ಪರಿಷತ್ ಸದಸ್ಯ ರಮೇಶ್ ಮಂಡಗದ್ದೆ ಹಾಗೂ ಜಿಲ್ಲೆಯ ಎಲ್ಲ ಫಾರ್ಮಸಿ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹನುಮಂತಪ್ಪ ಪ್ರಾರ್ಥಿಸಿ ವಿಜಯಕಾಂತ್ ಸ್ವಾಗತಿಸಿದರು, ಬೋರಯ್ಯ ನಿರೂಪಿಸಿದರು ಸತ್ಯನ್ ದೇವ್ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…