ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಆರ್ ಪ್ರಸನ್ನ ಕುಮಾರ್ ಅವರು ಎರಡನೇ ಬಾರಿಗೆ ಅತಿ ಹೆಚ್ಚು ಮತಗಳಿಂದ ಆಯ್ಕೆ ಆಗುವುದು ಖಚಿತ
ಆರ್ ಪ್ರಸನ್ನಕುಮಾರ್ ಅವರು ವಿಧಾನಪರಿಷತ್ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದು ಇವರ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅತಿ ಹೆಚ್ಚು ಅನುದಾನ ತಂದು ಪ್ರತಿಯೊಂದು ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ,ಆರೋಗ್ಯ ಹಾಗೂ ಪ್ರತಿ ಗ್ರಾಮಗಳ ಸಮಸ್ಯೆಗಳನ್ನು ಮೇಲ್ಮನೆಯಲ್ಲಿ ಧ್ವನಿಯೆತ್ತಿ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಪ್ರತಿಭಟಿಸುತ್ತಾ ಬಂದಿದ್ದು , ಕೋವಿಡ್ ವಾರಿಯರ್ಸ್ ಗಳಾದ ದಾದಿಯರು, ಡಾಕ್ಟರ್ಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ವಿಶೇಷ ಭದ್ರತೆಗಾಗಿ ಪರಿಷತ್ ಅಧಿವೇಶನದಲ್ಲಿ ಸರ್ಕಾರದ ಮನಮುಟ್ಟುವ ರೀತಿಯಲ್ಲಿ ಧ್ವನಿಯೆತ್ತಿದ ಕೀರ್ತಿ ಆರ್ ಪ್ರಸನ್ನ ಕುಮಾರ್ ಅವರಿಗೆ ಸಲ್ಲುತ್ತದೆ.

ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸಿನಂತೆ ಕಾಂಗ್ರೆಸ್ ಪಕ್ಷ ನೀಡಿದಂತಹ ಪಂಚಾಯತ್ ರಾಜ್ ಕಾರ್ಯಕ್ರಮಗಳನ್ನು ಈಗ ಅಧಿಕಾರ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ದಮನ ಗೊಳಿಸಿ ಒಬ್ಬ ಪಂಚಾಯತಿ ಸದಸ್ಯ ಸ್ವನಿರ್ಧಾರವನ್ನು ತೆಗೆದುಕೊಳ್ಳದ ರೀತಿಯಲ್ಲಿ ಸರ್ವಾಧಿಕಾರಿಯ ಧೋರಣೆಯನ್ನು ತೋರುತ್ತಿರುವ ಬಿಜೆಪಿ ಸರ್ಕಾರವನ್ನು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ದಿಕ್ಕರಿಸಿದ್ದಾರೆ.

ಈ ಬಾರಿ ಗ್ರಾಮ ಪಂಚಾಯತಿಯ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅತಿ ಹೆಚ್ಚು ಯುವಕರೇ ಆಯ್ಕೆ ಯಾಗಿದ್ದು ಈ ಯುವಕ ವಿರೋಧಿಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸುವ ಅವಕಾಶ ಬಂದೊದಗಿದೆ ಇದರ ಮೂಲಕ , ಈ ಬಾರಿ ಯುವಕರ ಮೊದಲ ಆದ್ಯತೆ ಆರ್ ಪ್ರಸನ್ನಕುಮಾರ್ ಆಗಿದ್ದಾರೆ.‌

ರೈತ , ಕಾರ್ಮಿಕ ಹಾಗೂ ಶ್ರೀಸಾಮಾನ್ಯನ ವಿರೋಧಿ ಬಿಜೆಪಿ ಸರ್ಕಾರವನ್ನು ಧಿಕ್ಕರಿಸಿ ಮತ್ತೆ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಈ ಚುನಾವಣೆ ಮುಖಾಂತರ ಪರಿಷತ್ತ ಅಭ್ಯರ್ಥಿಗೆ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಕೊಡಲಿದ್ದಾರೆ ಎಂಬ ವಿಶ್ವಾಸ ಇದೆ.

ಹೆಚ್.ಪಿ.ಗಿರೀಶ್
ಜಿಲ್ಲಾಧ್ಯಕ್ಷರು ,ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್.‌