ಶಿವಮೊಗ್ಗ: ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ವತಿಯಿಂದ ಶುಭಮಂಗಳ ಸಮುದಾಯ ಭವನದ ಬಳಿ ಇರುವ ಶ್ರೀ ಶನೈಶ್ಚರ ದೇವಾಲಯ ಆವರಣದಲ್ಲಿ ನಿನ್ನೆ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಸಾಮೂಹಿಕ ಆಶ್ಲೇಷ ಬಲಿ ಹಾಗೂ ಸಹಸ್ರಾಧಿಕ ದೀಪೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಕೆ.ಇ. ಕಾಂತೇಶ್, ಅರ್ಚಕರಾದ ವಿನಾಯಕ ಬಾಯರಿ, ಸುಬ್ರಹ್ಮಣ್ಯ ಅಡಿಗ ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು.