ಶಿವಮೊಗ್ಗ: ಇಂದು ಮೊದಲನೇ ಮತ ಪಾಲಿಕೆ ಬೂತ್ ನಲ್ಲಿ ನಾನೇ ಹಾಕಿದ್ದು, ಪಕ್ಷದ ಪಾಲಿಕೆ ಸದಸ್ಯರು ನನ್ನ ಜೊತೆಗೆ ಬಂದು ಮತ ಹಾಕಿದ್ದಾರೆ. ಎಲ್ಲಾ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಕೊನೆ ಕ್ಷಣದ ಸಿದ್ಧತೆ ಏನೂ ಇಲ್ಲ. ನಾನು ಮೊದಲಿನಿಂದಲೂ ಸಂಪರ್ಕದಲ್ಲಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆಲುವು ನನ್ನದೇ. ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದರೂ ಸಹ ಪಕ್ಷದ ನಾಯಕರು ಎಲ್ಲಾ ಪಂಚಾಯಿತಿ ಸದಸ್ಯರ ಮನೆ ಬಾಗಿಲಿಗೆ ಭೇಟಿ ನೀಡಿ ಮತದಾರರ ಮನವೊಲಿಸಿದ್ದಾರೆ. ಸೊರಬ ಮತ್ತು ಭದ್ರಾವತಿ ಕ್ಷೇತ್ರದಲ್ಲಿ ಮಧು ಬಂಗಾರಪ್ಪ, ಬಿ.ಕೆ. ಸಂಗಮೇಶ್ ಹೆಚ್ಚಿನ ಸಂಪರ್ಕ ಮಾಡಿದ್ದು, ಅತ್ಯಧಿಕ ಲೀಡ್ ಬರುವ ವಿಶ್ವಾಸವಿದೆ.
ಚನ್ನಗಿರಿ, ಹೊನ್ನಾಳಿ ಸೇರಿದಂತೆ ಹಾಗೂ ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸದಸ್ಯರಿಗೆ ಸಂಪರ್ಕ ಸಾಧಿಸಿ ಮತ ಯಾಚಿಸಿದ್ದು, ಎಲ್ಲರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು. ಹೆಚ್ಚಿನ ಅಂತರದಲ್ಲಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾಗರ, ಶಿವಮೊಗ್ಗದಲ್ಲಿಯೂ, ತೀರ್ಥಹಳ್ಳಿ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ನನಗೆ ಲೀಡ್ ದೊರೆಯಲಿದೆ ಎಂದರು.