ಶಿವಮೊಗ್ಗದ ಅಗಸವಳ್ಳಿ ಗ್ರಾಮ ವ್ಯಾಪ್ತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟಿರುವ ಜಮೀನು ಅಧಿಕೃತವಾಗಿ ಕಾಲಿ ನಿವೇಶನವು ಸಾರ್ವಜನಿಕರಿಗೆ ಮಾರಾಟ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಅಗಸವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸರ್ವೆ ನಂಬರ್ 167 ರ ಪೈಕಿ ಸುಮಾರು 2033 ಎಕರೆ 30 ಗುಂಟೆ ಜಮೀನಿನಲ್ಲಿ ಸರ್ಕಾರವು ಈ ಜಮೀನನ್ನು ಮುಳುಗಡೆ ಸಂತ್ರಸ್ತರಿಗೆ ಎಂದು ಮೀಸಲಿಟ್ಟಿದ್ದು ಆದರೆ ಕೆಲದಿನಗಳ ಹಿಂದೆ ಕೆಲ ವ್ಯಕ್ತಿಗಳು ಸೇರಿದಂತೆ ಸರ್ಕಾರಕ್ಕೆ ಸಂಬಂಧಪಟ್ಟ ಜಮೀನನ್ನು ಸುಮಾರು ಎರಡು ಎಕರೆಗಿಂತಲೂ ಹೆಚ್ಚಾಗಿ ಸಾರ್ವಜನಿಕರಿಗೆ ಅಗ್ರಿಮೆಂಟ್ ಮೂಲಕ ಮಾರಾಟ ಮಾಡಿಕೊಂಡು ಮುಳುಗಡೆ ಸಂತ್ರಸ್ತರು ಹಾಗೂ ಸರ್ಕಾರಕ್ಕೆ ವಂಚನೆ ಮಾಡಿದ್ದು ಮುಳುಗಡೆ ಸಂತ್ರಸ್ತರು ಹಾಗೂ ಸರ್ಕಾರಕ್ಕೂ ವಂಚನೆ ಮಾಡಿದ್ದು.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ ಈ ಕುರಿತು ನಮ್ಮ ಸಮಿತಿಯು ಕೂಡ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ರೀತಿ ವಂಚನೆ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಿಲ್ಲ ಆದ್ದರಿಂದ ಇಂದು ನಮ್ಮ ಸಮಿತಿಯು ದಿನಾಂಕ 13-12-2021 ರಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ವಂಚನೆ ಮಾಡಿ ಖಾಲಿ ನಿವೇಶನಗಳು ಮಾರಾಟ ಮಾಡಿಕೊಂಡು ಲಕ್ಷಾಂತರ ರೂ ಸಂಪಾದನೆ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಮಿತಿಯು ಆಗ್ರಹಿಸಿದರು.
ಮೇಲಿನ ಈ ಎಲ್ಲಾ ವಿಷಯಗಳು ತಮ್ಮೆಲ್ಲರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಸಮಿತಿಯು ಕೇಳಿಕೊಂಡರು.
ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿ ( R).
ಸಂಸ್ಥಾಪಕರು ( ರಾಜ್ಯದ್ಯಕ್ಷರು)
ಟಿ. ಕಿರಣ್ ಕುಮಾರ್ ಪವಾರ್.