12/12/21 ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು, ಕುಶಾಲನಗರ ರಸ್ತೆಯ ಅಶೋಕ ಹೋಟೆಲ್ ನಲ್ಲಿ ಬೀದಿ ಬದಿ ವ್ಯಾಪಾರಸ್ಥರ ತೀರ್ಥಹಳ್ಳಿ ತಾಲ್ಲೂಕು ಅಧ್ಯಕ್ಷರು ಹಾಗೂ ಟಿವಿಸಿ ಸದಸ್ಯರಾದ ಶ್ರೀ ರಾಘವೇಂದ್ರ ಶೆಟ್ಟಿ ರವರು, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ, ಟಿವಿಸಿ ಸದಸ್ಯರು ಹಾಗೂ ಬೀದಿ ಬದಿ ವ್ಯಾಪಾರಸ್ಥರ ರೊಂದಿಗೆ ಮುತ್ತಿನ ಹಾರವ ಹಾಕಿ, ಫಲಾಹಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು ಪಟ್ಟಣ ಪಂಚಾಯಿತಿ ಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ವಿಷಯಕ್ಕೆ ಸಂಬಂಧಿಸಿದಂತೆ ಎಷ್ಟು ಸಭೆಗಳು ನಡೆದಿವೆ, ಅದರ ನಿರ್ಣಯ ಕಾಫಿ ತೆಗೆದುಕೊಳ್ಳಿ, ಈ ಬಾರಿ ಬೀದಿ ಬದಿ ವ್ಯಾಪಾರಸ್ಥರ ಸಮೀಕ್ಷೆಯಲ್ಲಿ ಅಂಗವಿಕಲರು, ವಿದಿವೆಯವರು, ಮಹಿಳೆಯರು, ಆರ್ಥಿಕ ದುರ್ಬಲ ವರ್ಗದವರಿಗೆ ಗುರುತಿನ ಚೀಟಿ, ಮತ್ತು ವ್ಯಾಪಾರ ಪ್ರಮಾಣ ಪತ್ರ ನೀಡಲು ಮೊದಲ ಆದ್ಯತೆ ನೀಡಿ. ಪಿಎಂ ಸ್ವ ನಿಧಿ ಕಿರು ಸಾಲ ಹತ್ತರ ನಂತರ ಇಪ್ಪತ್ತು, ಅದರ ನಂತರ ಐವತ್ತು ಸಾವಿರ ರೂಪಾಯಿ ಸಾಲ ನೀಡಲಾಗುತ್ತಿದೆ.

ಟಿವಿಸಿ ಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳ ಕುರಿತು ಪಟ್ಟಿಯ ಅಜೆಂಡಾದಲ್ಲಿ ಬರುವಂತೆ ನೋಡಿಕೊಳ್ಳಿ, ಮತ್ತು ಅದಕ್ಕೆ ಪರಿಹಾರ ಸಭೆಯಲ್ಲಿ ಕಂಡುಕೊಳ್ಳುವಂತೆ ಪ್ರಯತ್ನಿಸಬೇಕು. ಹೊಸದಾಗಿ ಟಿವಿಸಿ ಸದಸ್ಯರಾಗಿ ಆಯ್ಕೆಯಾಗಿ ಬಂದವರಿಗೆ ನಿಮ್ಮ ಕರ್ತವ್ಯ, ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಾಗಿ ತಿಳಿಯದು ಅದಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ 90 ಜನರ ಟಿವಿಸಿ ಸದಸ್ಯರಿಗೆ ಒಂದು ತರಬೇತಿ ಕಾರ್ಯಾಗಾರ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಜನವರಿ 20 ರಂದು ಬೀದಿ ಬದಿ ವ್ಯಾಪಾರಸ್ಥರ ದಿನಾಚರಣೆ, ಅದರ ಅಂಗವಾಗಿ ಬೆಂಗಳೂರಿನಲ್ಲಿ ರಾಜ್ಯದಿಂದ 20 ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ತಪ್ಪದೇ ಭಾಗವಹಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಟಿವಿಸಿ ಸದಸ್ಯರಾದ ಶ್ರೀ ರಾಜಕುಮಾರ್, ಶ್ರೀ ತೋಷಿಫ್, ನವೀನ್ ಕುಮಾರ್, ಚಂದ್ರಪ್ಪ, ಸಂಘಟನೆಯ ಸದಸ್ಯರಾದ ಶ್ರೀ ಅಮಾನ್, ಶ್ರೀ ವಿಜಯ ಕುಮಾರ್, ಹಾಗೂ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…