ಆರೋಗ್ಯ ದ ಬಗ್ಗೆ ಕಾಳಜಿ ತುಂಬಾ ಅತ್ಯಗತ್ಯ. ಅದರಲ್ಲೂ ಐವತ್ತು ವರ್ಷ ವಯಸ್ಸು ದಾಟಿದ ನಂತರ ಪ್ರತಿಯೊಬ್ಬರೂ ಸಕಾಲದಲ್ಲಿ ನಿಯಮಿತ ವಾಗಿ ಆರೋಗ್ಯ ತಪಾಸಣೆ ಗೆ ಒಳಗಾಗಿ ಎಂದು ಫ್ರೆಂಡ್ಸ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಆರ್ ಎಸ್ ಗೋಪಾಲಕೃಷ್ಣ ರಾವ್ ನುಡಿದರು.
ಅವರು ಇಂದು ಬೆಳಿಗ್ಗೆ ಗೋಪಾಲ ಗೌಡ ಬಡಾವಣೆಯ ಫ್ರೆಂಡ್ಸ್ ಸೆಂಟರ್ ಹಾಲ್ ನಲ್ಲಿ ಕಂಪಾನಿಯೋ ಹಾಗೂ ಫ್ರೆಂಡ್ಸ್ ಸೆಂಟರ್ ವತಿಯಿಂದ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ತಪಾಸಣೆ ಮತ್ತು ಫೊಟ್ ಥೆರಪಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾಲ ಬದಲಾದಂತೆ ವ್ಯವಸ್ಥೆಗೆ ಚಿಕಿತ್ಸೆ ಗಳಿಗೆ ಹೊಂದಿ ಕೊಳ್ಳುವುದು ಅನಿವಾರ್ಯ ವಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ನೇತ್ರ ಮತ್ತು ರಕ್ತ ಭಂಡಾರದ ಕಾರ್ಯದರ್ಶಿ ಜಿ ವಿಜಯ ಕುಮಾರ್ ಮಾತನಾಡುತ್ತಾ ಈಗಾಗಲೇ ಫ್ರೆಂಡ್ಸ್ ಸೆಂಟರ್ ವತಿಯಿಂದ ಉಚಿತ ಆರೋಗ್ಯ ಶಿಬಿರ ರಕ್ತ ದಾನ ಶಿಬಿರ ಮತ್ತು ಹಲವಾರು ಸಮಾಜ ಮುಖಿ ಕಾರ್ಯಕ್ರಮ ಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತ ಬಂದಿದೆ.
ಇಂತಹ ಶಿಬಿರಗಳ ಉಪಯೋಗ ವನ್ನು ಸದಸ್ಯರು ಹಾಗೂ ಸಾರ್ವಜನಿಕ ರು ಸದುಪಯೋಗ ಪಡೆದು ಕೊಳ್ಳಲು ವಿನಂತಿ ಸಿದರು.ಕಂಪಾನಿಯೋ ಸಂಸ್ಥೆಯ ಮುಖ್ಯಸ್ಥ ರಾದ ಶ್ರೀ ಉನ್ನತ್ ರವರು ಮಾತನಾಡಿ ಫುಟ್ ಪಲ್ಸ ಥೆರಪಿ ಚಿಕಿತ್ಸೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಶಿಬಿರದಲ್ಲಿ ೨೦೦ಕ್ಕೂ ಹೆಚ್ಚು ಜನರು ಭಾಗವಹಿಸಿದರು.
ವೇದಿಕೆಯಲ್ಲಿ ಗೋಪಾಲಕೃಷ್ಣ ವಿಜಯ ಕುಮಾರ್ ಉನ್ನತ್ ,ಮಹೇಶ್ವರಪ್ಪ, ಶ್ರೀನಿವಾಸ್ ಕಾಮತ್ ,ಲೋಕೇಶ್ ರಮೇಶ್ ಬಾಬು ರಾಜೇಶ, ಅಣಜಿ ಬಸವರಾಜ್, ಎಮ್ ವಿಜಯ ಕುಮಾರ್ ಉಪಸ್ಥಿತಿ ಇದ್ದರು.ಶ್ರೀನಿವಾಸಕಾಮತ್ ರವರು ಸ್ವಾಗತಿಸಿದರು. ರಮೇಶ್ ಬಾಬು ಅವರು ವಂದಿಸಿದರು.