ಶಿವಮೊಗ್ಗ: ನಗರದ ಹೊನ್ನಾಳಿ ರಸ್ತೆಯ ಚಟ್ನಹಳ್ಳಿಯಲ್ಲಿರುವ ಲಾಡ್ಜ್ ವೊಂದರಲ್ಲಿ ಅನ್ಯ ಕೋಮಿನ ಹುಡುಗ ಹಾಗೂ ಕಾಲೇಜ್ ವಿದ್ಯಾರ್ಥಿನಿಗೆ ಸರ್ಕಾರದ ನಿಬಂಧನೆಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಲಾಡ್ಜ್ ನಲ್ಲಿ ರೂಂ ನೀಡಿ ಅನೈತಿಕ ಚಟುವಟಿಕೆಗೆ ಸಹಕಾರ ನೀಡಿದ ಲಾಡ್ಜ್ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಲಾಡ್ಜ್ ಮುಂದೆ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ವಿಶ್ವ ಹಿಂದೂ ಪರಿಷತ್ ಮನವಿ ಮತ್ತು ಬಜರಂಗದಳದಿಂದ ಮನವಿ ಸಲ್ಲಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಯುವಕರಿಗೆ ಯಾವುದೇ ನಿಬಂಧನೆ ಇಲ್ಲದೇ ರೂಂಗಳನ್ನು ನೀಡಿ ಕಾನೂನು ಬಾಹಿರ ಚಟುವಟಿಕೆಗೆ ಲಾಡ್ಜ್ ಮಾಲೀಕರು ಸಹಕರಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕಿದ್ದರೂ ಸಹ ಜಾಣ ಮೌನ ವಹಿಸಿದ್ದು, ತಕ್ಷಣಕ್ಕೆ ಈ ಲಾಡ್ಜ್ ನಲ್ಲಿರುವ ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿ ನಿನ್ನೆ ರೂಮಿಗೆ ಆಗಮಿಸಿದ ಯುವಕನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜೆ.ಆರ್. ವಾಸುದೇವ್, ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ವಿ.ಹೆಚ್.ಪಿ. ನಗರಾಧ್ಯಕ್ಷ ಸತೀಶ್ ಮುಂಚೆಮನೆ, ಪ್ರಮುಖರಾದ ಪ್ರಶಾಂತ್, ಎಸ್.ಆರ್. ಸುಧಾಕರ್, ಸುರೇಶ್ ಬಾಬು, ಅಂಕುಶ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…