ಆಶಾ ಕಾರ್ಯಕರ್ತೆಯರು ಕೋವಿಡ 19 ಸರ್ವವ್ಯಾಪ್ತಿ ಸಾಂಕ್ರಾಮಿಕ ರೋಗ ನಿಯಂತ್ರಣ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದು . ಈ ರೋಗ ನಿಯಂತ್ರಣ ಚಟುವಟಿಕೆಗಳಾದ ಹೋಮ್ ಕ್ವಾರಂಟೈನ್, ಹೋಮ್ ಐಸೋಲೇಶನ್ , ಕಾಂಟ್ರ್ಯಾಕ್ಟ್ ಟ್ರೇಸಿಂಗ್ ನಂತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿರುತ್ತಾರೆ . ಪ್ರಸ್ತುತ ಆಶಾ ಕಾರ್ಯಕರ್ತೆಯರು ಕೋವಿಡ 19 ಚಟುವಟಿಕೆಗಳು ಮತ್ತು ಕೋವಿಡ 19 ರ ನಿಯಂತ್ರಣ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಅಧಿಕ ಕೆಲಸದ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ .

ಗ್ರಾಮದಲ್ಲಿ ಮನೆ ಬಾಗಿಲಲ್ಲಿ ರಾಪಿಡ್ ಆ್ಯಂಟಿಜನ್ ಪರೀಕ್ಷೆ( RAT)ನಡೆಸಲು ಸಂಪೂರ್ಣವಾದ ವ್ಯಯಕ್ತಿಕ ಸುರಕ್ಷಿತ ಸಾಮಗ್ರಿಗಳನ್ನು (PPE) ಧರಿಸುವುದು ಅತ್ಯಗತ್ಯವಾಗಿದೆ ಮತ್ತು ಆರ್ ಎಟಿ ಕಿಟ್ ಗಳ ಬಳಕೆ ಮತ್ತು ಗಂಟಲು ದ್ರವ ಸಂಗ್ರಹಣೆಗೆ ಸೂಕ್ತವಾದ ಕೌಶಲ್ಯಗಳ ಅಗತ್ಯವಿದೆ .ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತರು ಕೋವಿಡ 19 ರೋಗ ಲಕ್ಷಣವಿರುವ ವ್ಯಕ್ತಿಗಳ ಮನೆ ಮನೆ ಸಮೀಕ್ಷೆ ಮಾಡುವ ಮುಖೇನ ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಿ ಹತ್ತಿರದ ಕೋವಿಡ 19 ಪರೀಕ್ಷಾ ಕೇಂದ್ರ / ಸಂಚಾರಿ ಪರೀಕ್ಷಾ ಕೇಂದ್ರಕ್ಕೆ ಕರೆ ಕೊಡುವುದು ಮತ್ತೆ ಪರೀಕ್ಷೆಗೆ ಒಳಗಾಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು . ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ವಹಿಸಲು ಈ ಮೂಲಕ ಸೂಚಿಸಲಾಗಿದೆ .

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ.