ಲಾಕ ಡೌನ್ ನಿಂದಾಗಿ ಸಹಜವಾಗಿ ಎಲ್ಲರಿಗೂ ತೊಂದರೆಯಾಗಿದೆ. ಸರ್ಕಾರವೂ ಕೂಡ ಪ್ಯಾಕೇಜ್ ಗಳನ್ನು ಘೋಷಿಸಿದೆ. ಏತನ್ಮಧ್ಯೆ ಅಂಗವಿಕಲರ ಪಿಂಚಣಿ 5ತಿಂಗಳಿಂದ ಆಗದಿರುವುದು ವಿಪರ್ಯಾಸವೇ ಸರಿ. ಎಲ್ಲಾ ಅಂಗಗಳು ಸರಿಯಿರುವವರಿಗೆ ಈ ಲಾಕ್ ಡೌನ್ 1ಶಾಪವಾಗಿ ಪರಿಣಮಿಸಿದೆ. ಇಂಥ ಸಮಯದಲ್ಲಿ ಅಂಗವಿಕಲರ ಗೋಳು ಕೇಳುವವರಿಲ್ಲದಾಗಿದೆ.

ಶಿವಮೊಗ್ಗದ ರಾಗಿಗುಡ್ಡದಿಂದ ಅಂಗವಿಕಲರ ಪಿಂಚಣಿ ಫಲಾನುಭವಿಯೊಬ್ಬರು ಸಾರ್ವಜನಿಕ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ನಡೆದು ಬಂದು ದಿನವೂ ಪಿಂಚಣಿಯ ಬಗ್ಗೆ ವಿಚಾರಿಸಿದರೆ ಉತ್ತರ ಒಂದೇ ಇನ್ನೂ ಬಂದಿಲ್ಲ. ಇದು ಅವರೊಬ್ಬರದೇ ಅಲ್ಲ ಎಷ್ಟೋ ಜನ ಅಂಗವಿಕಲರ ವ್ಯಥೆ. . 5 ತಿಂಗಳಿನಿಂದ ಅಂಗವಿಕಲರಿಗೆ ಪಿಂಚಣಿ ನೀಡದಿರುವುದನ್ನು ಸರ್ಕಾರ ಯಾವ ವಿಧದಲ್ಲಿ ಸಮರ್ಥಿಸಿಕೊಳ್ಳುತ್ತದೆಯೊ ದೇವರೇ ಬಲ್ಲ . ಇನ್ನಾದರೂ ಸರ್ಕಾರ ಎಚ್ಚೆತ್ತು ಈ ವಿಷಯದ ಬಗ್ಗೆ ಗಮನ ಹರಿಸಬೇಕೆಂದು ಪ್ರಜಾಶಕ್ತಿ ಆಶಯ
ಟೀಮ್ ಪ್ರಜಾಶಕ್ತಿ