17/12/21 ಶಿವಮೊಗ್ಗ ನಗರದ ನವಲೆಯ ಸವಳಂಗ ರಸ್ತೆಯ ಕೃಷಿ ವಿಜ್ಞಾನ ಸಂಶೋಧನಾ ವಿಶ್ವವಿದ್ಯಾಲಯದಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಘಟಕಗಳ, ದಿ:13/12/2021 ರಿಂದ 17/12/2021ವರೆಗಿನ ಪೂಜಾ ಚಾರಿಟೇಬಲ್ ಟ್ರಸ್ಟ್ (ರಿ) ಶಿವಮೊಗ್ಗ ಹಾಗೂ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ, ಸಹಯೋಗ ದಿಂದ ನಡೆದ 5 ದಿನಗಳ ವಸತಿ ಸಹಿತ ತರಬೇತಿ ಕಾರ್ಯಾಗಾರ, ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿದ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಯಾರು ಕಸವನ್ನು ಮನೆಗಳಿಗೆ ತರುವುದಿಲ್ಲ, ನಾವುಗಳು ಹಣಕೊಟ್ಟು ಕರಿಸಿದ ವಸ್ತುಗಳಾದ ಹಣ್ಣು, ತರಕಾರಿ, ಸೊಪ್ಪು, ಇತರೆ ಪದಾರ್ಥಗಳಿಂದ ನಮಗೆ ಬೇಡವಾದಾಗ ಅದು ಕಸವಾಗಿ ಕಾಣುವುದು.

ಈಗ ಎಲ್ಲಾ ಕಡೆ ರೈತರು ಬೇಸಾಯ ಬಿಟ್ಟು ತೋಟ ಮಾಡಲು ನಿಂತ್ತಿರುವರು, ಅಡಿಕೆ ತೋಟಕ್ಕೆ, ತೆಂಗಿನ ತೋಟಕ್ಕೆ ಕೊಟ್ಟಿಗೆ ಗೊಬ್ಬರ ಸಾಕಾಗುತ್ತಿಲ್ಲ, ಕುರಿ ಎಕ್ಕೆ ಗೊಬ್ಬರ, ಸಗಣಿ ಗೊಬ್ಬರ, ಎರೆಹುಳು ಗೊಬ್ಬರ, ಬೇವಿನ ಹಿಂಡಿ, ಇನ್ನೂ ಹಲವು ತರಹದ ಗೊಬ್ಬರಗಳಿವೆ. ಈಗ ಎಲ್ಲಾ ಗದ್ದೆಗಳು ಲೇಔಟ್ ಗಳಾಗಿ, ಮಣ್ಣು ಕಾಣದ ಹಾಗೆ ಮನೆಗಳಿಗೆ ಸ್ವಲ್ಪ ಜಾಗವು ಬೀಡದೆ ಟೈಲ್ಸ್ ಮಹ್ಯ ವಾದರೆ ರಸ್ತೆಗಳು ಕಾಂಕ್ರೀಟ್ ಮತ್ತು ಡಾಂಬರ್ ಮಹ್ಯ ವಾಗಿದೆ. ಸಿರಿವಂತರು ತಮ್ಮ ಅಂಗಳದ ಪಾಟಿನ ಹೂವಿನ ಗಿಡಗಳಿಗೆ ಮಣ್ಣು ಹಾಗೂ ಗೊಬ್ಬರವ ಅಮೆಜಾನ್ ನಲ್ಲಿ ಕರಿದಿಸುತ್ತಿರುವರು.

ನಾನು ನನ್ನ ಅಂಗಳದಲ್ಲಿ ಸಣ್ಣದೊಂದು ಗೊಬ್ಬರದ ಗುಡಿಯ ಮಾಡಿ ನಮ್ಮ ಮನೆಯ ಎಲ್ಲಾ ಕಸವನ್ನು ಪ್ಲಾಸ್ಟಿಕ್ ಹೊರತು ಪಡಿಸಿ ಹಾಕಿ ಗೊಬ್ಬರ ಮಾಡುವೆ, ಜೋತೆಗೆ ಅಕ್ಕ ಪಕ್ಕದ ಮನೆಯ ಕಸವನ್ನು ಕೇಳಿ ಪಡೆಯುವೆ ಗೊಬ್ಬರ ಮಾಡಿ ಗಿಡಗಳಿಗೆ ಹಾಕಿ ರುಚಿಯಾದ ನಾಟಿ ಕರಿಬೇವು, ಬಸಳೆ ಸೊಪ್ಪು, ಪಪ್ಪಾಯಿ, ದೇವರಿಗೆ ಹೂವುಗಳ ಪಡೆಯುವೆ, ಈಗ ಪಕ್ಕದ ಮನೆಯವರು ಕಸವ ಕೊಡದೆ ಗೊಬ್ಬರ ಮಾಡುಲು ಸುರು ಮಾಡಿರುವರು, ಹಲವರಿಗೆ ಕಸಗಳ ಪ್ರಯೋಜನದ ಲಾಭದ ಬಗ್ಗೆ ತಿಳಿಯದು, ಅವರುಗಳಿಗೆ ತಿಳಿದರೆ, ಯಾರು ಕಸವ ಕೋಡರು, ಹಿಗಾಗಲೇ ಹಲವು ಕಂಪನಿಗಳು ಎಲ್ಲಾ ರೀತಿಯ ಕಸವ ಕೊಡಿ, ಹಣವ ಪಡಿ ಎಂದು ಮುಂದೆ ಬಂದಿವೆ, ಇದನ್ನ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರೆ ರಾತ್ರಿಯ ವೇಳೆಯಲ್ಲಿ ರಸ್ತೆಯಲ್ಲಿ, ಮೋರಿಯಲ್ಲಿ, ತಿಪ್ಪೆಯಲ್ಲಿ ಬಿದ್ದ ಕಸುವು ಕಳ್ಳತನ ವಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲೆಯ 35 ಕಾರ್ಯಾಗಾರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಶಿವಮೊಗ್ಗ, ಯೋಜನ ಅಧಿಕಾರಿಗಳಾದ ಶ್ರೀಮತಿ ತಾರ, ಜಿಲ್ಲಾ ಕಾರ್ಯಕ್ರಮ ಸಹಾಯಕ ವ್ಯವಸ್ಥಾಪಕರಾದ ಶ್ರೀ ಉಮೇಶ್ ಎನ್.ಆರ್.ಎಲ್.ಎಂ ಶಿವಮೊಗ್ಗ ಕೃಷಿ ಮತ್ತು ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿಗಳಾದ
ಶ್ರೀ ಹನುಮಂತ ಸ್ವಾಮಿ,ಪೂಜಾ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷರಾದ ಶ್ರೀಸುನಿಲ್ M K, ಕಾರ್ಯದರ್ಶಿಗಳಾದ ಶ್ರೀ ಮತಿ ಸವಿತಾ, ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…