ಕೋಲಾರ ನ್ಯೂಸ್…
ಕೋಲಾರ,ಡಿ.೧೭: ಜಯ ಕರ್ನಾಟಕ ಕೋಲಾರ ಜಿಲ್ಲಾ ಘಟಕದ ವತಿಯಿಂದ ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಆರ್ ಎಲ್.ಜಾಲಪ್ಪರವರ ನಿಧನಕ್ಕೆ ಒಂದು ನಿಮಿಷಗಳ ಕಾಲ ಮೌನಾಚರಿಸಿ, ಇವರ ಆತ್ಮಕ್ಕೆ ಶಾಂತಿ ಸಿಗಲಿ ಇವರ ಅಗಲಿಕೆಯ ನೋವನ್ನು ಭರಿಸುವಂಥ ಶಕ್ತಿಯನ್ನು ಕುಟುಂಭ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಕೆ ಆರ್. ತ್ಯಾಗರಾಜ್ ಮಾತನಾಡಿ, ಆರ್ ಎಲ್.ಜಾಲಪ್ಪರವರು ರಾಜ್ಯ ಸರ್ಕಾರದಲ್ಲಿ ೧೯೮೩/೧೯೮೪ ರಲ್ಲಿ ಸಹಕಾರ ಸಚಿವರಾಗಿ ಮಾಜಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದು, ಕೋಲಾರದಲ್ಲಿ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿ ಅನೇಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ದಾರಿ ದೀಪವಾದಂತಹ ಜಾಲಪ್ಪನವರ ತಮ್ಮ ಹೆಸರಿನಲ್ಲಿ ಜಾಲಪ್ಪ ಆಸ್ಪತ್ರೆಯನ್ನು ನಿರ್ಮಿಸಿ ಕೋಲಾರ ಜಿಲ್ಲೆಯ ಸಾವಿರಾರು ನಿರುದ್ಯೋಗಿ ಬಡ ಕುಟುಂಬಗಳಿಗೆ ಆಸರೆಯಾಗಿ ಈ ಹಿಂದೆ ರೋಗಿಗಳು ತುರ್ತು ಚಿಕಿತ್ಸೆಗೆ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ಇವರು ನಿರ್ಮಿಸಿದ ಆಸ್ಪತ್ರೆಯಿಂದ ಕೋಲಾರ ಜಿಲ್ಲೆಯ ಹಾಗೂ ಆಂಧ್ರ ತಮಿಳುನಾಡು ಜನರು ಕೂಡ ಇಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಯನ್ನು ಪಡೆಯುವಂತಾಯಿತು. ಎಂದು ಅವರ ಸೇವೆಯನ್ನು ಸ್ಮರಿಸಿದರು.
ಆರ್.ಎಲ್ ಜಾಲಪ್ಪ ರವರು ದೊಡ್ಡಬಳ್ಳಾಪುರದಲ್ಲಿ ವೃದ್ಧಾಶ್ರಮಗಳನ್ನು ನಡೆಸುತ್ತಾ ಸಮಾಜಸೇವೆಯನ್ನು ನಿಸ್ವಾರ್ಥತೆಯಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಇವರು ತಮ್ಮ ನಿಧನದ ಬಳಿಕ ತಮ್ಮ ನೇತ್ರವನ್ನು ದಾನ ಮಾಡಿ ನಾಲ್ವರ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಇವರ ಅಗಲಿಕೆಯು ವೈದ್ಯಕೀಯ ಕ್ಷೇತ್ರಕ್ಕೆ ಹಾಗೂ ಬಡ ಕುಟುಂಬಗಳಿಗೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ ಎಂದು ಕಂಬನಿ ಮಿಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಿವೆಂಕಟೇಶ್, ಕೋ.ನಾ.ಪ್ರಭಾಕರ್, ಸುದಾಕರ್ ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಆಕೃ ಸೋಮಶೇಖರ್, ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೊ.ನಾ. ಪ್ರಭಾಕರ್, ನಾ.ಮಂಜುನಾಥ್, ಶ್ರೀನಿವಾಸ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ವಿ.ಜಗದೀಶ್, ಸಂಘಟನಾ ಕಾರ್ಯದರ್ಶಿಗಳಾದ ಮಂಜುನಾಥ ಸಿಂಗ್, ತೊರದೇವಂಡಹಳ್ಳಿಯ ಆರ್.ರವಿ, ಟೈಗರ್ ವೆಂಕಟೇಶ್, ನಂದೀಶ್, ಲಕ್ಷ್ಮಣ್ಗೌಡ, ಕುಂಟನಹಳ್ಳಿ ಮುನಿಸ್ವಾಮಿ, ಚಿಟ್ನಹಳ್ಳಿಯ ಆಂಜನಗೌಡ ಇನ್ನಿತರರು ಉಪಸ್ಥಿತರಿದ್ದರು