19/12/21 ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಚಂದನ ಆರೋಗ್ಯ ಪಾರ್ಕ್ ನಲ್ಲಿ ಕೊರೋನಾ ಲಾಕ್ ಡೌನ್ ನಿಂದ ಪಾರ್ಕ್ ನ ಕಡೆಗೆ ಯಾವ ನಾಗರಿಕರು ಇತ್ತ ಸುಳಿಯಲ್ಲಿ ಲಾಕ್ ಡೌನ್ ತೆರವಿನ ನಂತರ ಒಬ್ಬರೇ ಪಾರ್ಕ್ ನಲ್ಲಿ ವಿಹಾರಕ್ಕೆ ತೆರಳುತ್ತಿರುವರು, ಆದರೆ ಎರಡು ವರ್ಷಗಳಿಂದ ಬೆಳೆದು ನಿಂತ ಗಿಡಗಂಟಿಗಳು ನಾಗರಿಕರ ವಾಯು ವಿಹಾರಕ್ಕೆ ತೊಂದರೆ ಉಂಟುಮಾಡುತ್ತಿದ್ದ ಮನಗಂಡ ಸ್ಥಳೀಯ ಗೋಪಾಲಗೌಡ ಬಡಾವಣೆ, ಹಾಗೂ ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿಗಳ ಒಕ್ಕೂಟ,ಹಾಗೂ ಚಂದನ ಆರೋಗ್ಯ ಪಾರ್ಕ್ ಅಭಿವೃದ್ಧಿ ಸಮಿತಿಯು ಮತ್ತು ಸ್ವಚ್ಛ, ಸುಂದರ ಸಮಾಜಕ್ಕಾಗಿ, ಪರಸ್ಪರ ಸಹಕಾರಕ್ಕಾಗಿ, ಸ್ವಚ್ಛತೆ ಹಾಗೂ ಜನಜಾಗೃತಿ. ಮೂಡಿಸುತ್ತಿರುವ ಪರೋಪಕಾರಂ ತಂಡದೊಂದಿಗೆ ಪರಿಸರ ಆಸಕ್ತರು ಸೇರಿ ಭಾನುವಾರ ಪಾರ್ಕ್ ಸ್ವಚ್ಛತೆ ಮಾಡಲಾಯಿತು.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶ್ರೀ ಧರ್, ತ್ಯಾಗರಾಜ್ ಮಿತ್ಯಾಂತ್, ಜಿಡಿ ಮಂಜುನಾಥ್, ಕಲ್ಗೋಡ್ ರತ್ನಾಕರ್, ಡಾ.ಗೌತಮ್, ಚನ್ನವೀರಪ್ಪ ಗಾಮನಗಟ್ಟಿ, ಶ್ರೀ ಕಾಂತ್ ಹೊಳ್ಳಾ, ಶ್ರೀ ಕಾಂತ್, ಜೈಶಂಕರ್, ಅನಿಲ್ ಹೆಗ್ಡೆ, ಬಾಲಕೃಷ್ಣ, ಮಂಜು, ಮತ್ತು ಮಹಿಳೆಯರು ಪರೋಪಕಾರಂ ತಂಡದ ಸದಸ್ಯರು, ಸ್ಥಳೀಯ ನಿವಾಸಿಗಳು, ಪರಿಸರ ಆಸಕ್ತರು ಹಾಗೂ ಇತರರೂ ಭಾಗವಹಿಸಿದ್ದರು.