ಶಿವಮೊಗ್ಗ: ಕಳೆದ ಎರಡು ವರ್ಷಗಳಿಂದ ಕೈಗಾರಿಕಾ ಕಚ್ಚಾ ವಸ್ತುಗಳ ಬೆಲೆಯಲ್ಲಿ ಅನಿಯಂತ್ರಿತ ಏರಿಕೆ ಕಂಡು ಬಂದಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚುವ ಹಂತ ತಲುಪಿವೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಮಾಚೇನಹಳ್ಳಿಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಒಕ್ಕೂಟದಿಂದ ಇಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈಗಾಗಲೇ ಶೇ. 15 ರಷ್ಟು ಕೈಗಾರಿಕೆಗಳು ಮುಚ್ಚಿವೆ. ಶೇ. 20 ರಷ್ಟು ಮುಚ್ಚುವ ಹಂತದಲ್ಲಿವೆ. ದೇಶದಲ್ಲಿ 2500 ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2 ವರ್ಷಗಳ ಕಾಲ ಕೊರೋನಾದಿಂದಾಗಿ ಸಣ್ಣ ಕೈಗಾರಿಕೆಗಳು ಆರ್ಥಿಕ ಸಂಕಷ್ಟದಲ್ಲಿವೆ. ಬೃಹತ್ ಸ್ಟೀಲ್ ಉತ್ಪಾದನಾ ಘಟಕಗಳು ಲಾಭದಲ್ಲಿದ್ದರೂ, ಕಚ್ಚಾ ವಸ್ತುಗಳ ಬೆಲೆ ಏರಿಸಿವೆ ಎಂದರು.ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಣ್ಣ ಕೈಗಾರಿಕೆಗಳ ಬೇಡಿಕೆ ಈಡೇರಿಸಬೇಕು.

ಕಚ್ಚಾ ವಸ್ತುಗಳ ಬೆಲೆ ಇಳಿಸಬೇಕು. ಕೈಗಾರಿಕೆಗಳನ್ನು ಉಳಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷ ಎಂ.ಎ.ಎ ರಮೇಶ್ ಹೆಗ್ಡೆ, ಉಪಾಧ್ಯಕ್ಷ ವೈ.ವಿ. ಮಧುಕರ್ ಜೋಯ್ಸ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ್, ಪದಾಧಿಕಾರಿಗಳಾದ ಜಿ.ವಿ. ಕಿರಣ್ ಕುಮಾರ್, ವಿಶ್ವೇಶ್ವರಯ್ಯ, ಸಂತೋಷ್, ರಾಜು, ಜಿ. ವಿಜಯಕುಮಾರ್ ಮತ್ತಿತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…