ಶಿವಮೊಗ್ಗ: ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ಪ್ರತಿಮೆ ವಿರೂಪಗೊಳಿಸಿ, ನಾಡಧ್ವಜ ಸುಟ್ಟಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಇಂದು ನಗರದ ಮಹಾವೀರ ವೃತ್ತದಲ್ಲಿ ಎಂಇಎಸ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡ ದ್ರೋಹಿಗಳನ್ನು ಕರ್ನಾಟಕದಿಂದ ಹೊರಗಟ್ಟಬೇಕು. ಕನ್ನಡಕ್ಕಾಗಿ ಹೋರಾಡಿದವರನ್ನು ಪೊಲೀಸರು ಬಂಧಿಸಿದ್ದು, ಕೂಡಲೇ ಬಿಡುಗಡೆ ಮಾಡಬೇಕು.
ದುಷ್ಕೃತ್ಯ ಎಸಗಿದ ಎಂಇಎಸ್ ಪುಂಡರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಮಧುಸೂದನ್ ಎಸ್ ಎಂ ಪ್ರಮುಖರಾದ ರವಿಪ್ರಸಾದ್ ಎಂ ,ಎಸ್. ಭರತ್, ರಘುನಂದನ್, ಎಂ. ನಯಾಜ್, ನೂರುಲ್ಲಾ ಮೊದಲಾದವರಿದ್ದರು.