ನಿನ್ನೆಯಿಂದ ತುಂಬ ಚರ್ಚೆಯಲ್ಲಿ ಇದ್ದಂಥ ugly language ಕನ್ನಡ ವಿಷಯಕ್ಕೆ ಗೂಗಲ್ ಸಂಸ್ಥೆ ಕನ್ನಡದಲ್ಲೇ ಟ್ವೀಟ್ ಮಾಡಿ ಕ್ಷಮೆ ಯಾಚಿಸಿದೆ. ಗೂಗಲ್ ಹೇಳಿರುವ ಪ್ರಕಾರ ಎಲ್ಲ ಸರ್ಚ್ ರಿಸಲ್ಟ್ ಗಳು ಪರಿಪೂರ್ಣವಾಗಿರುವುದಿಲ್ಲ. ಆಗಿರುವುದು ತಪ್ಪಾಗಿದೆ. ಗೂಗಲ್ ಇದಕ್ಕಾಗಿ ಕ್ಷಮೆ ಯಾಚಿಸುತ್ತದೆ ಎಂದು ಹೇಳಿದೆ. ನಿನ್ನೆ ರಾಜ್ಯವ್ಯಾಪಿ ಅನೇಕ ಕನ್ನಡ ಸಂಘಟನೆಗಳು ಹಾಗೂ ಹಿರಿಯರು ಗೂಗಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ