ದಿನಾಂಕ ೨೦.೧೨.೨೦೨೧ರಂದು ಸೊಮವಾರ ಸಹ್ಯಾದ್ರಿ ಲಲಿತ ಕಲಾ ಅಕಾಡಮಿ, ಲಲಿತ ಕೇಂದ್ರ ಮತ್ತು ಪ್ರೇರಣಾ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಜ.ತಿಮ್ಮಯ್ಯ ಅವರ ಸ್ಮರಣೆ ಕಾರ್ಯಕ್ರಮವನ್ನು ವನಿತಾ ವಿದ್ಯಾಲಯ ದಲ್ಲಿ ಏರ್ಪಡಿಸಲಾಗಿತ್ತು. ಹರಿಪ್ರಸಾದ್ ಅವರು ಜ.ತಿಮ್ಮಯ್ಯ ಅವರ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಲ್ ರಾಮಚಂದ್ರ ಮತ್ತು ಸುಬೇದಾರ್ ವಾಸಪ್ಪ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ರಾಮಚಂದ್ರ ಅವರು ಸೈನ್ಯ ಸೇರಿ ದೇಶ ಸೇವೆ ಮಾಡಲು ಸಲಹೆ ನೀಡಿದರು.
ಸುಬೇದಾರ್ ವಾಸಪ್ಪನವರು ಮಾತನಾಡಿ ದೇಶಕ್ಕಾಗಿ ಸೇವೆ ಸಲ್ಲಿಸುವುದಕ್ಕೆ ನಾವೆಲ್ಲಾ ಪುಣ್ಯ ಮಾಡಿರಬೇಕು. ಅಂತಹ ಅವಕಾಶ ತಮಗೆ ದೊರಕಿತ್ತು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ನೂತನ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ವಹಿಸಿದ್ದ ರು.ವೇದಿಕೆ ಯಲ್ಲಿ ಪ್ರೇರಣಾ ಸಾಂಸ್ಕೃತಿಕ ವೇದಿಕೆ ಯ ಅಧ್ಯಕ್ಷ ರಾದ ರುಕ್ಮಿಣಿ ಅನಂದ್ ಮತ್ತು ಲಲಿತಕಲಾ ಕೇಂದ್ರದ ಅಧ್ಯಕ್ಷೆ ತಾರಾಪ್ರಸಾದ್ ಅವರು ಉಪಸ್ಥಿತರಿದ್ದರು.ವಿಜಯಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.