ಶ್ರೀ.ಕುಂಭೇಶ್ವರ ಪತ್ತಿನ ಸಹಕಾರ ಸಂಘದ 2020-21ನೇ ಸಾಲಿನ 6ನೇ ವರ್ಷದ ಸಂಘದ ಸರ್ವ ಸದಸ್ಯರ ಮಹಾಸಭೆಯು ದಿನಾಂಕ:19.12.2021ರ ಭಾನುವಾರ ಸಂಘದ ಆವರಣ, ಕುಂಬಾರ ಬೀದಿ, ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನೇರವೇರಿತು.
ಅಧ್ಯಕ್ಷರಾದ ಜಿ.ವೀರೇಶ್ ಮಾತನಾಡಿ, ಸಾಲಗಾರರೇ ಸಂಘದ ಆಸ್ತಿಯಾಗಿದ್ದು, ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಮತ್ತೆ ಸಾಲ ಪಡೆದು ಸಂಘದ ಅಭಿವೃದ್ಧಿಗೆ ಸಹಕರಿಸಲು ತಿಳಿಸಿದರು,
ಪ್ರತಿ ಸದಸ್ಯರು ಕಡ್ಡಾಯವಾಗಿ ಉಳಿತಾಯ ಖಾತೆಯನ್ನು ಪ್ರಾರಂಭಿಸಬೇಕು ಮತ್ತು 1 ವರ್ಷದಲ್ಲಿ ಕನಿಷ್ಠ 500ರೂಗಳ ವ್ಯವಹಾರ ನಡೆಸತಕ್ಕದ್ದು. ಕ್ಷೇಮನಿಧಿ ಫಂಡ್ ಕಟ್ಟದೇ ಇರುವ ಸದಸ್ಯರು ಕ್ಷೇಮನಿಧಿ ಫಂಡನ್ನು ಕಟ್ಟುವುದು.
ಸಾಲವನ್ನು ಪಡೆದು ಸಕಾಲದಲ್ಲಿ ಹಿಂತಿರುಗಿಸಿ ಸಂಘದ ಅಭಿವೃದ್ದಿಗೆ ಸಹಕರಿಸಲು ಕರೆದರು, ಸಭೆಯಲ್ಲಿ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ.ಕೆ.ಎಸ್, ಹಾಗೂ ಸಹಕಾರ ಸಂಘದ ನಿರ್ದೇಶಕರುಗಳಾದ ಹೆಚ್.ಆರ್.ಓಂಕಾರಪ್ಪ, ಹೆಚ್.ಈ.ತಿಪ್ಪೇಶ್, ಆರ್.ಹಾಲೇಶ್, ಬಿ.ಎಂ.ಚಂದ್ರಶೇಖರ್, ಎಸ್.ಎಂ.ಕುಮಾರಸ್ವಾಮಿ, ಆರ್.ಯೋಗೀಶ್, ಕರಿಬಸಮ್ಮ, ಹೆಚ್ ಎಲ್.ಸುಕನ್ಯಾ ಹಾಗೂ ಸಮಾಜ ಬಂದವರು ಉಪಸ್ಥಿತರಿದ್ದರು.