ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆ ಭಗ್ನಗೊಳಿಸಿದೆ ಖಾನಾಪುರದಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿದು ಕನ್ನಡ ಧ್ವಜವನ್ನು ಸುಟ್ಟುಹಾಕಿ ದೇಶದ್ರೋಹಿ ಕೆಲಸ ನಾಡದ್ರೋಹಿ ಕೆಲಸವನ್ನು ಮಾಡಿದ್ದಾರೆ ಇಂಥ ಕೆಲಸವನ್ನು ನಾವು ಖಂಡಿಸುತ್ತೇವೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಹೇಳಿದರು.

ಈ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಮ್ಮ ಹೆಮ್ಮೆಯ ಶಿವಮೊಗ್ಗದಲ್ಲೂ ಕೂಡ ಹಲವಾರು ದೇಶಪ್ರೇಮಿಗಳು ಸ್ವತಂತ್ರ ಹೋರಾಟಗಾರರು ಧಾರ್ಮಿಕ ಚಿಂತಕರು ಹೀಗೆ ಅನೇಕ ಮಹಾನುಭಾವರ ಪ್ರತಿಮೆಗಳು ಶಿವಮೊಗ್ಗಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಹಾಗೆಯೇ ಅವುಗಳ ರಕ್ಷಣೆ ಕೂಡ ನಮ್ಮ ಜವಾಬ್ದಾರಿಯಾಗಿರುತ್ತದೆ. ಇತ್ತೀಚಿಗೆ ನಡೆಯುತ್ತಿರುವ ಸನ್ನಿವೇಶಗಳನ್ನು ಗಮನಿಸಿದಾಗ. ಇಂತಹ ಘಟನೆಗಳು ಮುಂದೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಸದಸ್ಯ ರೇಖಾ ರಂಗನಾಥ್ ಹೇಳಿದರು.

ನಮ್ಮ ಜಿಲ್ಲೆಯ ಪ್ರತಿಮೆಗಳಿಗೆ ಕೂಡ ರಕ್ಷಣೆಯ ಅವಶ್ಯಕತೆ ಇರುತ್ತದೆ ಹಾಗಾಗಿ ಎಲ್ಲೆಲ್ಲಿ ಪ್ರತಿಷ್ಠಿತ ವ್ಯಕ್ತಿಗಳ ಪ್ರತಿಮೆಗಳು ಇವೆಯೋ ಅಲ್ಲಿ ಪೊಲೀಸ್ ರಕ್ಷಣೆಯ ಅವಶ್ಯಕತೆ ಇರುತ್ತದೆ. ಆದ್ದರಿಂದ ದಯವಿಟ್ಟು ಇಂತಹ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ ಅಥವಾ ಪೊಲೀಸ್ ಕಣ್ಗಾವಲು ಇರಬೇಕಾಗಿ ಈ ಮೂಲಕ ತಮಗೆ ಒತ್ತಾಯಿಸುತ್ತಿದ್ದೇವೆ. ಹಾಗೂ ಶಿವಮೊಗ್ಗ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಲ್ಲಿ ಅನವಶ್ಯಕ ಧರ್ಮಾಧಾರಿತ ಗಲಭೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ತಮ್ಮಲ್ಲಿ ಕೋರುತ್ತಿದ್ದೇವೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…