ಶಿವಮೊಗ್ಗ : ಮಲೆನಾಡು ಹೋರಾಟಗಳ ಅಸ್ಮಿತೆಯನ್ನು ಬೆಳಗಿಸಿದ ನೆಲೆ ಹಾಗೂ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದೆ ಇಂತಹ ಸಾಲುಗಳಲ್ಲಿ “ಸಾಹಿತ್ಯ ಅಂಗಳ”ದ ಯೋಜನೆ, ಚಿಂತನೆ ಸಾರಸ್ವತಾ ಲೋಕಕ್ಕೆ ಮೈಲಿಗಲ್ಲಾಗಲಿದೆ ಎಂದು ರೋಟರಿ ವಿಜಯ್ ಕುಮಾರ್ ತಿಳಿಸಿದರು.

ಅವರು ಗಾರಾ.ಟ್ರಸ್ಟ್ ನಿಂದ ಹಮ್ಮಿಕೊಂಡಿರುವ “ಸಾಹಿತ್ಯ ಅಂಗಳ-1000” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೊಂದು ಸುಧೀರ್ಘ ಪ್ರಯತ್ನ ಹಾಗೂ ವಿಶೇಷ ಚಿಂತನೆಯಾಗಿದ್ದು ಅನೇಕ ಬರಹಗಾರರನ್ನು ಸಾಹಿತ್ಯ ವಲಯಕ್ಕೆ ಪರಿಚಯಿಸಿ, ಉತ್ತೇಜಿಸುವ ಉದ್ದೇಶ ಶ್ಲಾಘನೀಯವಾಗಿದೆ ಎಂದರು.
ಮೊದಲಿಗೆ ಸಾಹಿತ್ಯ ಅಂಗಳದಲ್ಲಿ ಸ್ಥಾಪನೆ ಮಾಡಲಾಗಿರುವ ಶಾಶ್ವತ ಕನ್ನಡ ಧ್ವಜಸ್ತಂಭದ ಧ್ವಜಾರೋಹಣವನ್ನು ನೆರವೇರಿಸಿದರು.

ಸಂಸ್ಥೆಯ ಗಾರಾ.ಶ್ರೀನಿವಾಸ್ ಮಾತನಾಡಿ ಸಾಹಿತ್ಯ ಅಂಗಳದ ಯೋಜನೆ ಕನಸಿನ ಕೂಸಾಗಿದ್ದು ಇದರಿಂದ ಅನೇಕ ವೇದಿಕೆಗಳನ್ನು ರೂಪಿಸಿ ಬರಹಗಾರರಿಗೆ ಅಣಿಗೊಳಿಸುವ ಕಾಯಕದಲ್ಲಿ ಮುಂದಾಗಿದ್ದೇವೆ, ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ವಿಭಾಗದಲ್ಲಿ ಸೀಮಿತಗೊಳಿಸಿ ಸಾಹಿತ್ಯಾಸಕ್ತರ ಸೂರುಗಳ ಜಗುಲಿ ಕಟ್ಟೆ ಹಾಗೂ ಅಂಗಳಗಳೇ ಈ ಅಕ್ಷರ ಯಾತ್ರೆಗೆ ಸರಳ “ಸಾಹಿತ್ಯ ಅಂಗಳದ ವೇದಿಕೆಯಾಗಿದ್ದು ಇದರ ಪ್ರಯೋಜನ ಪಡೆದುಕೊಳ್ಳಲು ಕನ್ನಡದ ಮನಸುಗಳಿಗೆ ವಿನಂತಿ ಮಾಡಿಕೊಂಡರು.

ಸಾಹಿತ್ಯ ಅಂಗಳದ ಮೊದಲ ಕಾರ್ಯಕ್ರಮದಲ್ಲಿ ಉದಯೋನ್ಮುಖ ಯುವ ಲೇಖಕಿ ಕಾವ್ಯ ಶಿವಮೊಗ್ಗ, ಅರಣ್ಯ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಮರಡಿ, ರಂಗಕರ್ಮಿ ಶಿವಕುಮಾರಯ್ಯ ಮಾರವಳ್ಳಿ,ಯವರುಗಳು ಕವಿಗೋಷ್ಠಿಯಲ್ಲಿ ಕವಿತೆಯನ್ನು ವಾಚನ ಮಾಡಿದರು ಸಾವಿತ್ರಮ್ಮನವರು ಜನಪದ ಶೈಲಿಯಲ್ಲಿ ಬರೆದಿದ್ದ ಕಟ್ಟುಪದವನ್ನು ಹಾಡಿ ರಂಜಿಸಿದರು. ಇಂತಿವರುಗಳಿಗೆ “ಸಾಹಿತ್ಯ ಅಂಗಳ-1” ಪ್ರಶಸ್ತಿ ಮತ್ತು ಕನ್ನಡ ಪುಸ್ತಕವನ್ನು ನೀಡಿ ಗೌರವಿಸಲಾಯಿತು.

ಕನ್ನಡ ಸಾಂಸ್ಕೃತಿಕ ಲೋಕದ ರಾಯಬಾರಿ ನಟ ಪುನೀತ್ ರಾಜಕುಮಾರ್ ರವರ ಕುರಿತು ಬರೆದ ಪದ್ಯ ವಾಚನ ಹಾಗೂ ಪುಷ್ಪನಮನ ಜರುಗಿತು.
ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್, ಜೆಸಿಐ ಶಿವಮೊಗ್ಗ ಶರಾವತಿಯ 2022ರ ಅವಧಿಯ ಅಧ್ಯಕ್ಷರಾದ ಜೆಸಿ. ಸೌಮ್ಯ ಅರಳಪ್ಪ, ಚುಂಚಾದ್ರಿ ಮಹಿಳಾ ಸಂಘಟನೆಯ ಅದ್ಯಕ್ಷರಾದ ಭಾರತಿ ರಾಮಕೃಷ್ಣ, ಕೃಷಿನಗರ 2ನೇ ಹಂತದ ನಿವಾಸಿಗಳ ಸಂಘದ ಅಧ್ಯಕ್ಷರಾದ ಹೆಚ್.ಮಂಜಪ್ಪ ಹಾಗೂ ಟ್ರಸ್ಟಿ ಗಾರಾ.ನಾಗರಾಜ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು, ನಾಗರೀಕರು ಭಾಗವಹಿಸಿದ್ದರು

ವರದಿ ಮಂಜುನಾ ಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…