ಶಿವಮೊಗ್ಗ: ಶಿವಮೊಗ್ಗದ ಅರ್ಚಕ ವೃಂದ, ವಾಸವಿ ವಿದ್ಯಾಲಯ, ಸಂಸ್ಕೃತ ಭಾರತಿ ಮತ್ತು ತರುಣೋದಯ ಸಂಸ್ಕøತ ಸೇವಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸಂಸ್ಕೃತೋತ್ಸವದ ಅಂಗವಾಗಿ ಡಿ.23 ರಿಂದ 29 ರವರೆಗೆ ರವೀಂದ್ರನಗರದ ಶ್ರೀ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಮಹಾಭಾರತ ಪ್ರವಚನ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಕೃತ ಭಾರತಿ ಅಧ್ಯಕ್ಷ ಎನ್.ವಿ. ಶಂಕರನಾರಾಯಣ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿದಿನ ಸಂಜೆ 6ರಿಂದ 8 ಗಂಟೆಯವರೆಗೆ ಪ್ರವಚನ ನಡೆಯಲಿದೆ. ಡಿ.23ರಂದು ಸಪ್ತಾಹ ಉದ್ಘಾಟನೆಯೊಂದಿಗೆ ಭೀಷ್ಮ ಪ್ರಜ್ಞೆ ವಿಷಯ ಕುರಿತು ಹಾಗೂ ಡಿ.24ರಂದು ವಿದುರ ನೀತಿ ಕುರಿತು ಶಿರಸಿಯ ವಿದ್ವಾನ್ ಕುಮಾರ್ಕಾಂಿತ್ ಭಟ್ಟರು ಪ್ರವಚನ ನೀಡಲಿದ್ದಾರೆ ಎಂದರು.ಡಿ.25ರಂದು ಪಾಂಡವರ ವನವಾಸ ಕುರಿತು ಶ್ರೀ ಆದಿಚುಂಚನಗಿರಿಯ ಡಾ.ಮಧುಸೂದನ ಅಡಿಗೆರೆ, 26ರಂದು ವಿರಾಟಪರ್ವ ಕುರಿತು ಕಾರ್ಕಳದ ಆದರ್ಶ ಗೋಖಲೆ, 27ರಂದು ಶ್ರೀ ಕೃಷ್ಣ ಸಂಧಾನ ಕುರಿತು
ಶಿವಮೊಗ್ಗದ ವಿದ್ವಾನ್ ಮಹೀಪತಿ ಎಸ್.ಜೋಯ್ಸ್, 28ರಂದು ಗಧಾಯುದ್ಧ ಹಾಗೂ 29ರಂದು ಶ್ರೀ ಕೃಷ್ಣಾರ್ಜುನ ಸಂಧಾನ ಕುರಿತು ವಿದ್ವಾನ್ ಪಂಜ ಭಾಸ್ಕರ ಭಟ್ಟರು ಪ್ರವಚನ ನೀಡಲಿದ್ದು, 29ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.ಇದೇ ಸ್ಥಳದಲ್ಲಿ ಡಿ.24ರ ಸಂಜೆ 6.30ಕ್ಕೆ ತಾಳಮದ್ದಲೆ, ಶಲ್ಯ ಸಾರಥ್ಯ ಹಾಗೂ ಎಂ.ಎ.ಹೆಗ್ಡೆ ಯವರ ನೆನಪಿನ ಕಾರ್ಯಕ್ರಮ ನಡೆಯಲಿದೆ ಎಂದು ಮರವಂತೆ ಅಚ್ಚುತ ಹೆಬ್ಬಾರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅರ್ಚಕವೃಂದ ಅಧ್ಯಕ್ಷ ಆ.ಪ.ರಾಮಭಟ್ಟ, ಸಂಸ್ಕೃತ ಭಾರತೀ ಕಾರ್ಯದರ್ಶಿ ಆ.ನಾ.ವಿಜೇಂದ್ರರಾವ್ ಉಪಸ್ಥಿತರಿದ್ದರು.