ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕರು ಚನ್ನಬಸಪ್ಪನವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕದ ಹೆಮ್ಮೆಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯರವರನ್ನು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀಯುತ ಡಿಕೆ ಶಿವಕುಮಾರ್ ಅವರನ್ನು ಗಡಿಪಾರು ಮಾಡಬೇಕೆಂದು ಹೇಳಿಕೆ ನೀಡಿದ್ದಾರೆ.
ಕೇವಲ ರಾಜಕಾರಣಕ್ಕಾಗಿ ಹಿಂದುತ್ವ ಮತ್ತು ಗೋಹತ್ಯೆ ಪದಗಳನ್ನು ಬಳಸಿಕೊಳ್ಳುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಭಾರತೀಯರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಿದ್ದಾರೆ ಹೊರತು ಕೊಟ್ಟಿರುವ ಆಶ್ವಾಸನೆಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದರು ಸಹ ಇಂತಹ ಬಾಲಿಶ ಹೇಳಿಕೆಗಳನ್ನು ಕೊಡುವಲ್ಲಿ ಸದಾ ಮುಂದಿರುತ್ತಾರೆ ಕಾಂಗ್ರೆಸ್ ಪಕ್ಷ ಸರ್ವಧರ್ಮದ ಜನಾಂಗದ ಪರವಾಗಿ ಹಾಗೂ ಭಾರತದ ಅಭಿವೃದ್ಧಿಗಾಗಿ ಶ್ರಮಿಸಿರುವ ಪಕ್ಷ . ಬಹುಶಹ ನಮ್ಮ ಶಿವಮೊಗ್ಗದ ಶಾಸಕರು ಹಾಗೂ ಸಚಿವರಾದಂತಹ ಈಶ್ವರಪ್ಪನವರು ಜಿಲ್ಲೆಯಲ್ಲಿ ಇರದ ಕಾರಣ ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಹಾಸ್ಯಸ್ಪದವಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ಆಸ್ತಿಯಾದ ಶಿವಪ್ಪನಾಯಕ ಮಾರುಕಟ್ಟೆ ( ಬ್ಯಾರೀಸ್ ಸಿಟಿ ಸೆಂಟರ್ ಮಾಲ್) ಮುಸಲ್ಮಾನರು ಭೋಗ್ಯಕ್ಕೆಪಡೆದಿರುವ ಈ ಕಟ್ಟಡವನ್ನು ಬಿಜೆಪಿ ಆಡಳಿತದಲ್ಲಿ ಮಾರಾಟ ಮಾಡಲು ಹೊರಟ ಇವರು ಕೇವಲ ಮತಕ್ಕಾಗಿ ರಾಜಕಾರಣಕ್ಕಾಗಿ ಮಾತ್ರ ಹಿಂದುಗಳ ಪರವಾಗಿ ಇರುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ . ಇವರಿಂದ ಸಾಧ್ಯವಾದಲ್ಲಿ ಬಿಜೆಪಿ ಆಡಳಿತದಲ್ಲಿ ಶಿವಪ್ಪನಾಯಕ ಮಾರುಕಟ್ಟೆಯನ್ನು ಮಾರಾಟ ಮಾಡಲು ಮುಂದಾದವರ ವಿರುದ್ಧ ಕ್ರಮ ಕೈಗೊಳ್ಳಲಿ. ಆನಂತರ ಇವರು ಹೇಳಿಕೊಳ್ಳುವಂತೆ ಇವರ ಡಬಲ್ ಎಂಜಿನ್ ಸರ್ಕಾರದಿಂದ ಹೇಳಿದಂತೆ ನಡೆದುಕೊಳ್ಳಲು ಸಾಧ್ಯವಾದರೆ ನಮ್ಮ ನಾಯಕರ ವಿಷಯದಲ್ಲಿ ಇವರು ಕೊಟ್ಟ ಹೇಳಿಕೆಯಂತೆ ಮಾಡಿ ತೋರಿಸಲಿ.