ಸರ್ಕಾರವು ಜಿಲ್ಲಾ ಮತ್ತು ಮದ್ಯಮ ಪತ್ರಿಕೆ ಗಳಿಗೆ ಜಾಹಿರಾತು ಪ್ಯಾಕೇಜ್ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಪತ್ರಿಕಾ ಸಂಪಾದಕರು ಖಂಡನೆ ವ್ಯಕ್ತಪಡಿಸಿದ್ದಾರೆ.
ಕಳೆದ 2 ತಿಂಗಳಿನಿಂದ ಲಾಕ್ ಡೌನ್ ಪರಿಣಾಮ ಸರ್ಕಾರ ಹಾಗು ಇಲಾಖೆಯ ಜಾಹಿರಾತು ನಿಂತಿವೆ.ಇದರಿಂದ ಪತ್ರಿಕೆಗಳ ಆದಾಯಕ್ಕೆ ಕೊರತೆಯಾದ ಹಿನ್ನಲೆಯಲ್ಲಿ ಪತ್ರಿಕಾ ಸಿಬ್ಬಂದಿ.ಮುದ್ರಣ.ಹಂಚಿಕೆದಾರರಿಗೆ ವೇತನ ನೀಡಲು ಅಸಾದ್ಯವಾಗಿರುವ ಸಂಕಷ್ಟಗಳ ಪರಿಸ್ಥಿತಿ ಯಲ್ಲಿ ಸರ್ಕಾರಕ್ಕೆ ನಮ್ಮ ಸಂಘಟನೆಗಳ ಮೂಲಕ ಮನವಿ ಸಲ್ಲಿಸಿದ್ದರೂ. ನಿರ್ಲಕ್ಷ್ಯ ಮಾಡಿರುವುದು ಜಿಲ್ಲಾ ಮಟ್ಟದ ಪತ್ರಿಕೆ ಗಳ ಧಮನ ಮಾಡುವ ಸರ್ಕಾರದ ಕ್ರಮದ ವಿರುದ್ದ ಪ್ರತಿಭಟನೆ ಅನಿವಾರ್ಯವಾಗಿದ್ದು..ಇನ್ನೆರೆಡು ದಿನದಲ್ಲಿ ಜಿಲ್ಲಾ ಮಟ್ಟದ ಪತ್ರಿಕೆ ಗಳಿಗೆ ಜಾಹಿರಾತು ನೀಡದಿದ್ದಲ್ಲಿ ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಗು ಪತ್ರಿಕಾ ಸಂಪಾದಕರು ಬೀದಿಗೆ ಬಂದು ಹೋರಾಟ ನಡೆಸುವುದು ಅನಿವಾರ್ಯ ಎಂದು ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಹೆಚ್.ಎನ್‌.ಮಂಜುನಾಥ್ ತಿಳಿಸಿದ್ದಾರೆ.