ಶಿವಮೊಗ್ಗ ನಗರದ LBS ನಗರ ನಿವಾಸಿಯಾದ ಶರಣ್ಯ.ಜಿ.ಮರಾಠೆ ರವರು ಭಾರತೀಯ ಭೂ ಸೇನೆಯ ಸಬ್ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಪ್ರೌಢ ಶಿಕ್ಷಣದವರೆಗೂ ಮತ್ತೂರಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಶರಣ್ಯರವರು, ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ, ಮೈಸೂರಿನ ಎಸ್ ಜೆಸಿಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿದ್ದಾರೆ.
2020 ರಲ್ಲಿ INET ಪರೀಕ್ಷೆ ಬರೆದು, ಉತ್ತೀರ್ಣರಾಗಿ, ನಂತರ SSB ಸಂದರ್ಶನ, ಆರೋಗ್ಯ ತಪಾಸಣೆ, ದೇಹದಾಢ್ಯ ಪರೀಕ್ಷೆ ಹೀಗೆ ಎಲ್ಲಾ ಹಂತಗಳಲ್ಲೂ ಯಶಸ್ಸನ್ನು ಸಾಧಿಸಿ, ಕೇರಳದ ಎಜಿಮಾಲ ದಲ್ಲಿರುವ INDIAN NAVAL ACADEMY ಯಲ್ಲಿ 6ತಿಂಗಳ ತರಬೇತಿ ಮುಗಿಸಿ, ಮುಂದಿನ ಸೇವೆಗಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಶರಣ್ಯರವರು ಪ್ರತಿನಿಧಿಸಿದ 2021 ರ ಬ್ಯಾಚ್ ನಲ್ಲಿ ಕರ್ನಾಟಕದ ಮೂರು ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ದೊರೆತ್ತಿದ್ದು, ಆ ಮೂವರಲ್ಲಿ ಶರಣ್ಯ ಒಬ್ಬರೇ ಮಹಿಳೆ ಎನ್ನುವುದು ಹೆಮ್ಮೆ.
ಮಧ್ಯಮ ವರ್ಗದ ಕುಟುಂಬದ ಪ್ರತಿಭಾನ್ವಿತೆ, ಸತತ ಪ್ರಯತ್ನ ಹಾಗೂ ದೃಢ ನಿರ್ಧಾರದಿಂದ ಭಾರತೀಯ ಭೂ ಸೇನೆಗೆ ಸಬ್ -ಲೆಪ್ಟಿನೆಂಟ್ ಆಗಿ ಭಾರತಾಂಬೆಯ ಸೇವೆ ಮಾಡಲು ತೆರಳುತ್ತಿರುವ ಕು/ ಶರಣ್ಯ.ಜಿ.ಮರಾಠೆ ರವರಿಗೆ ಭಾಜಪ ಶಿವಮೊಗ್ಗ ನಗರ ಮಹಿಳಾಮೋರ್ಛಾ ತಂಡವು ಶುಭಕೋರಿ, ಗೌರವಿಸಿದೆ.
ಈ ಸಂದರ್ಭದಲ್ಲಿ ಶರಣ್ಯರವರ ಪೋಷಕರಾದ ಗಿರೀಶ್ ಮರಾಠೆ, ಕಿರಣ್ ರವರು, ಮಹಿಳಾ ಮೋರ್ಛಾ ಅಧ್ಯಕ್ಷರಾದ ಸುರೇಖ ಮುರಳೀಧರ್, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ಶ್ರೀನಿವಾಸ್, ಆರತಿ ಪ್ರಕಾಶ್, ಸದಸ್ಯರಾದ ಸುರೇಖಾ ಪಾಲಕ್ಷಪ್ಪ, ಯಶೋಧ, ಅನಿಲ, ನಾಗವೇಣಿ, ಸೌಭಾಗ್ಯ, ಕರಿಬಸಮ್ಮ, ಸುನಿತಾ ಹಾಗೂ ಪುಷ್ಪಲತಾ ಉಪಸ್ಥಿತರಿದ್ದರು.