ರಿಪ್ಪನ್ ಪೇಟೆ : ಪಟ್ಟಣದ ಸಾಗರ ರಸ್ತೆಯ ಕುಕ್ಕಳಲೆ ಸಂಪರ್ಕ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಹೆಸರು ಇಡಲಾಗಿತ್ತು.ಗುರುವಾರ ತಡರಾತ್ರಿ ಕೆಲವು ದುಷ್ಕರ್ಮಿಗಳು ಪುನೀತ್ ರಾಜಕುಮಾರ್ ರವರ ನಾಮಫಲಕಕ್ಕೆ ಬಣ್ಣಹಚ್ಚಿ ವಿಕೃತಿ ಮೆರೆದಿದ್ದರು.
ಈ ಘಟನೆಯನ್ನು ಖಂಡಿಸಿ ರಿಪ್ಪನ್ ಪೇಟೆಯ ಕಸ್ತೂರಿ ಕನ್ನಡ ಸಂಘ,ಕಲಾ ಕೌಸ್ತುಭ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಪ್ಪು ಅಭಿಮಾನಿಗಳು ರಿಪ್ಪನ್’ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಮೆರವಣಿಗೆ ಮೂಲಕ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷರಾದ ಅರ್ ಎ ಚಾಬುಸಾಬ್, ಪ್ರಧಾನ ಕಾರ್ಯದರ್ಶಿ ರಮೇಶ್ ಫ಼್ಯಾನ್ಸಿ,ಕರವೇ ಜಿಲ್ಲಾಧ್ಯಕ್ಷರಾದ ಸೂಡೂರು ಶಿವಣ್ಣ,ಕರವೇ ಹೊಸನಗರ ತಾಲೂಕ್ ಅಧ್ಯಕ್ಷರಾದ ಉಲ್ಲಾಸ್,ಮುಖಂಡರಾದ ಟಿ. ಆರ್. ಕೃಷ್ಣಪ್ಪ, ವಿನಾಯಕ ಶೆಟ್ಟಿ , ಅಮೀರ್ ಹಂಜಾ,ರವೀಂದ್ರ ಸಂದೀಪ್ ಶೆಟ್ಟಿ , ಕೆರೆಹಳ್ಳಿ,ದೇವರಾಜ್ ಕೆರೆಹಳ್ಳಿ, ಮಂಜುನಾಥ್ ಶೆಟ್ಟಿ ,ಆರ್ ಎನ್ ಮಂಜುನಾಥ್,ಹಿರಿಯಣ್ಣ ಭಂಡಾರಿ, ರಾಘು, ಶಿವು ವೊಡಹೊಸಳ್ಳಿ, ವಿಜಿ ಮಳವಳ್ಳಿ, ಗೋಪಿ, ಪ್ರವೀಣ್ ಲಕ್ಷ್ಮಿಕಾಂತ್, ಮಂಜು ಮಳವಳ್ಳಿ.ಮಧು ಬಿಳಕಿ ನವೀನ್, ಶ್ರೀನಿವಾಸ, ರವಿ ಆರ್ಟ್ಸ್ ಸತೀಶ್ ,ಮಂಜು,ರಾಘವೇಂದ್ರ ಗವಟೂರು ಸೇರಿದಂತೆ ಮೊದಲಾದವರಿದ್ದರು