ಆರ್ಯ ಈಡೀಗ ಮಹಾಸಂಸ್ಥಾನ ಪೀಠಾರೋಹಣ ಸಮಾರಂಭ ದಿನಾಂಕ 02.02.2022 ರ ಬಗ್ಗೆ ಶ್ರೀ ರೇಣುಕಾ ಪೀಠ, ಶ್ರೀ ನಾರಾಯಣಗುರು ಮಠ ಸೋಲೂರು ಗ್ರಾಮ, ಮಾಗಡಿ ತಾ: ರಾಮನಗರ ಜಿಲ್ಲೆಯ ನಿಯೋಜಿತ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಗಳು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದು ಈ ದಿನ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಗೌರವಾಧ್ಯಕ್ಷರಾದ ಗೋಪಾಲ ಕೃಷ್ಣ ಬೇಳೂರು ರವರ ಅಧ್ಯಕ್ಷತೆಯಲ್ಲಿ ಪೀಠಾರೋಹಣದ ಸಮಾರಂಭದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಶ್ರೀಧರ್ ಹುಲತ್ತಿಕೊಪ್ಪ , ಮಾಜಿ ಶಾಸಕರಾದ ಡಾ.ಜಿ.ಡಿ. ನಾರಾಯಣಪ್ಪ, ಜಿಲ್ಲಾ ಆರ್ಯ ಈಡಿಗ ಸಂಘದ ಮಹಿಳಾ ಅಧ್ಯಕ್ಷೆ ಗೀತಾಂಜಲಿ, ಬಿಲ್ಲವ ಸಮಾಜ ಅಧ್ಯಕ್ಷರಾದ ಭುಜಂಗಯ್ಯ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು,ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್, ಸಾಗರ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಲಾವಿಗ್ಗೆರಿ ಸೋಮಶೇಖರ್, ಬಾಳೆಗುಂಡಿ ಸುರೇಶ್ ಹಾಗೂ ಸಮಾಜ ಬಾಂಧವರು, ಜಿಲ್ಲಾ ಆರ್ಯ ಈಡಿಗ ಸಂಘದ ಎಲ್ಲಾ ಸದಸ್ಯರು, ಸಮಾಜದ ಮುಖಂಡರುಗಳು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು…