ಶಿವಮೊಗ್ಗ, ಡಿ. ೨೭ಃ ಶಿವಮೊಗ್ಗೆಯ ಪ್ರತಿಷ್ಟಿತ ಶಿವಮೊಗ್ಗ ಜಿಲ್ಲಾಕೈಗಾರಿಕಾ ಮತ್ತು ವಾಣಿಜ್ಯ ಸಂಘದಚುನಾವಣೆಯಲ್ಲಿಎನ್. ಗೋಪಿನಾಥ್ ನೇತೃತ್ವದತಂಡ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುವಲ್ಲಿ ಯಶಸ್ವಿಯಾಗಿದೆ.

ತಂಡದ ೦೯ ಮಂದಿ ಚುನಾಯಿತರಾಗಿದ್ದು, ಪರಿವರ್ತನತಂಡದ ನಾಲ್ವರು ಹಾಗೂ ಈರ್ವರು ಸ್ವತಂತ್ರವಾಗಿಆಯ್ಕೆಯಾಗಿದ್ದಾರೆ. ಒಟ್ಟು ೭೪೬ ಮಂದಿ ಸದಸ್ಯರ ಪೈಕಿ ೫೯೬ ಮಂದಿ ಮತ ಚಲಾಯಿಸಿದ್ದರು.ಕಳೆದ ೦೯ ವರ್ಷಗಳ ನಂತರಇದೇ ಮೊದಲ ಬಾರಿಗೆ ಈ ರೀತಿಯಚುನಾವಣೆ ನಡೆದಿದ್ದು, ಶೇ.೮೦ ಮತದಾನವಾಗಿದೆ. ಎನ್. ಗೋಪಿನಾಥ್ (೪೨೮), ಉದಯಕುಮಾರ್‌ಎಸ್. ಎಸ್. (೪೦೫), ಗೋಪಿನಾಥ್ ಬಿ.(೩೮೨), ಪ್ರದೀಪ್ ವಿ.ಎಲಿ (೩೫೬), ಪರಮೇಶ್ವರ್ ಈ. (೩೫೩), ರಾಜು ಎಂ.(೩೪೯), ಜಿ. ವಿಜಯಕುಮಾರ್ (೩೪೦), ಜಗದೀಶ್ ಮಾತಣ್ಣನವರ್ (೩೨೨), ವಸಂತ ಹೋಬಳಿದಾರ್ (೩೦೮), ಸಂತೋಷ್ ಬಿ.ಆರ್. (೩೦೭), ಮಧುಸೂದನ ಐತಾಳ್ (೩೦೬), ಸುಕುಮಾರ್ ಕೆ. ಎಸ್. (೨೬೪), ಗಣೇಶ್ ಎಂ. ಅಂಗಡಿ (೨೬೩), ಮಂಜೇಗೌಡ (೨೫೬), ಮರಿಸ್ವಾಮಿ (೨೫೧) ಚುನಾಯಿತರಾಗಿದ್ದಾರೆ. ಪರಾಜಿತಗೊಂಡವರಲ್ಲಿ ದೀಪಕ್‌ಎಸ್. ವಿ.(೨೩೯), ಜಿ. ಎನ್. ಪ್ರಕಾಶ್ (೨೩೮), ಸುರೇಶ್ ಎ. ಎಂ.(೨೩೩), ಜಗನ್ನಾಥ್ ಎಂ.(೨೨೨), ಸಂದೀಪ್ ಡಿ. ಪಿ.(೨೧೦), ಗೋಪಿ ಎಂ.ಎA.(೧೯೭), ವಿಶ್ವೇಶ್ವರಯ್ಯಎಸ್. (೧೮೯), ನಾಗೇಶ್‌ರಾವ್ ಕೆ.ಜಿ. (೧೮೮), ದೇವರ್‌ಚಂದ್ ವಿ.(೧೮೫), ವಿನೋದ್ ಕೆ.ಜಿ. (೧೮೨), ಸೆಂಥಿಲ್ ವೇಲನ್ (೧೭೭), ಶಿವರಾಜ್ ಯು.ಎಂ.(೧೫೧), ಪ್ರಕಾಶ್ ಎ. ಎನ್. (೧೪೧) ಮತ ಪಡೆದಿದ್ದರು. ಈ ಬಾರಿ ಸ್ಪರ್ಧಾಕಣದಲ್ಲಿ ೨೮ ಮಂದಿ ಇದ್ದರು.ಈ ಪೈ ಹಾಲಿ ಎಂಟು ಮಂದಿ ನಿರ್ದೇಶಕರುಕೂಡಾಕಣದಲ್ಲಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…