ನೆರೆಯ ಆಂಧ್ರಪ್ರದೇಶ ರಾಜ್ಯದ ಮುಖ್ಯಮಂತ್ರಿಯ ಪ್ರಭಾವದಿಂದ ಮೈಸೂರ ಜಿಲ್ಲೆಗೆ ವರ್ಗಾಯಿಸಿಕೊಂಡು ವಕ್ಕರಿಸಿರುವ ಈ ಗಟ್ಟಿಗಿತ್ತಿ ಅದೆಷ್ಟು ಜನ ಅಧಿಕಾರಗಳ ಜೀವ ಹಿಂಡುತ್ತಾಳೋ ತಿಳಿಯದಾಗಿದೆ ಎನ್ನುತ್ತಾರೆ ಮೈಸೂರಿನ ಜನ ಹಾಗೂ ಹೆಸರು ಹೇಳದ ಅಧಿಕಾರಿಗಳು. ಪರಿಶಿಷ್ಟ ಜಾತಿಯ, ಸಮಾನ ಶ್ರೇಣಿಯ ಅಧಿಕಾರಿ ಶರತ ಐಎಎಸ್ ಅಧಿಕಾರಿಯನ್ನು ತನ್ನ ಅನುಕೂಲಕ್ಕಾಗಿ ರಾತ್ರೋರಾತ್ರಿ ಬೇರೆಡೆಗೆ ಕಿತ್ತಾಕಿಸಿ ಮೈಸೂರಿಗೆ ವಕ್ಕರಿಸಿದರು. ಕೊಡಗಿನ ಸಮಾನ ಶ್ರೇಣಿಯ ಅಧಿಕಾರಿಯ ಬುಡಕ್ಕೆ ಬಿಸಿ ಮುಟ್ಟಿಸಿದರು. ಮೈಸೂರು ಜಿಲ್ಲೆಯ ಹಲವಾರು ಜನಪ್ರತಿನಿಧಿಗಳನ್ನು ಖ್ಯಾರೇ ಎನ್ನದೇ ಮೂಲೆಗುಂಪು ಮಾಡಿದರು. ಈಗ ಐಎಎಸ್ ಅಧಿಕಾರಿ ಶಿಲ್ಪಾನಾಗ್ ಅವರನ್ನು ಇನ್ನಿಲ್ಲದಂತೆ ಕಾಡಿ, ಮಾನಸೀಕವಾಗಿ ಧೃತಿಗೆಡಿಸಿ, ಅವರು ರಾಜೀನಾಮೆ ಕೊಡುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ ಎಂದರೇ ಅದೆಷ್ಟು ಪ್ರಭಾವಿಯಾಗಿರಬೇಕು ಈಯಮ್ಮ. ಊಹೇಗೂ ಸಿಕ್ಕದು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನರವಿಲ್ಲದ ಸರಕಾರಕ್ಕೆ ನಾಚಿಕೆಯಾಗಬೇಕು.೨೦೦೯-೧೦ ರಲ್ಲಿಯೇ ನಾನು ಬರೆದುಕೊಂಡಂತೆ ಯಡಿಯೂರಪ್ಪನವರು ಹುಟ್ಟು ಹೋರಾಟಗಾರರೇ ವಿನಹ ಒಳ್ಳೆಯ ಆಡಳಿತಗಾರರಲ್ಲ. ಹೋರಾಟಗಾರ ವ್ಯಕ್ತಿ ಯಡಿಯೂರಪ್ಪನವರಿಗೆ ಆಡಳಿತದ ಅನುಭವ ಸಾಲದು. ( ಉದಾಹರಣೆಗೆ – ಆಡಳಿತ ಯಂತ್ರದಲ್ಲಿ ಒಬ್ಬ ಅಧಿಕಾರಿಯ ಬಗ್ಗೆ ಇಷ್ಟೇಲ್ಲಾ ಕೆಳ ಅಧಿಕಾರಿಗಳು ಸಮಶ್ರೇಣಿಯ ಅಧಿಕಾರಿಗಳು ಅದೇ ಕ್ಷೇತ್ರದ ಎಮ್.ಪಿ. ೧೯ ಜನ ಅಧಿಕಾರಸ್ಥ ಜನಪ್ರತಿನಿಧಿಗಳು, ಈಯಮ್ಮನನ್ನು ವಿರೋಧಿಸಿದರೂ ಕಿವಿಗೆ ಹಾಕಿಕೊಳ್ಳದೇ, ಜಾಣ ಕುರುಡು ತೋರುತ್ತಾರೆಂದರೇ ಎನರ್ಥ) ಯಡಿಯೂರಪ್ಪನವರ ವಯಸ್ಸಿಗೆ, ಅಧಿಕಾರದ ಚುಕ್ಕಾಣೆ ಹಿಡಿದ ಕಾರಣಕ್ಕೆ, ಬಹುಜನ ಕೋಮಿನ ಪ್ರತಿನಿಧಿ ಎಂಬ ಕಾರಣಕ್ಕಾಗಿ ಇವರನ್ನು ಬಹುಪರಾಕ ಎಂದು ಹಾಡಿ ಹೊಗಳಬೇಕಷ್ಟೇ ಮಿಕ್ಕಿದ್ದು ( ೦ ). ಕರ್ನಾಟಕ ರಾಜ್ಯದ ಬಿ.ಜೆ.ಪಿ. ಲಿಂಗಾಯತರ ಶರೀರ ಬ್ರಾಹ್ಮಣರ ಶಾರೀರವಾಗಿ ಕಾರ್ಯನಿರ್ವಸುತ್ತಿದೆ. ಜನಸಾಮಾನ್ಯರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ
ಎಮ್.ಎ.ಸುಗಂಧಿ. ವಕೀಲರು ಪತ್ರಕರ್ತರು. .ಬೆಂಗಳೂರು M.No. 9731113141.
ಕೃಪೆ ಪ್ರಜಾಶ್ರೀ ಪತ್ರಿಕೆ