ಗೋವಿಂದಪುರ ಅಪಾರ್ಟ್‌ಮೆಂಟ್ ಕೋರಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಬಾಕಿ ಇರುವ ಹಣ ಪಾವತಿಸಲು ಜುಲೈ ಅಂತ್ಯದವರೆಗೆ ಕಾಲಾವಕಾಶ.ಗೋವಿಂದಾಪುರ 2ಜಿ ಮನೆಯ ಅಪಾರ್ಟ್‌ಮೆಂಟ್ ಗೆ ಅರ್ಜಿ ಸಲ್ಲಿಸಿದ 2991 ಫಲಾನುಭವಿಗಳ ಆಯ್ಕೆ.

ಶಿವಮೊಗ್ಗ ನಗರದ ಜನರ ಕನಸಿನ ಮನೆ ಪಡೆಯಲು ಸರ್ಕಾರ ಅನೇಕ ಸೌಲಭ್ಯ ಗಳನ್ನು ನೀಡಲಾಗಿದ್ದು. ಅದರ ಉಪಯೋಗ ಪಡೆಯಬೇಕು.ಹಾಗು ಈಗಾಗಲೇ 5838 ಫಲಾನುಭವಿಗಳ ಆಯ್ಕೆ ನಡೆದಿದ್ದು ಉಳಿದ ಫಲಾನುಭವಿಗಳ ಆಯ್ಕೆ ಗೆ ಅರ್ಜಿಯನ್ನು ಜುಲೈ 1ರಿಂದ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪನವರು ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ. ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್.ಆಯುಕ್ತ ಚಿದಾನಂದ ವಠಾರೆ ಸೇರಿದಂತೆ ಹಲವರಿದ್ದರು..

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ