ಹೊಸನಗರ : ಸಮೀಪದ ಕಚ್ಚಿಗೆಬೈಲು ಗ್ರಾಮದಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ಹಾಗೂ ಇದೇ ಸಂಧರ್ಭದಲ್ಲಿ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕಚ್ಚಿಗೆಬೈಲು ಮುಖ್ಯ ರಸ್ತೆಯಿಂದ ಸಂಪಳ್ಳಿ ಗ್ರಾಮದವರೆಗೂ ಎತ್ತಿನಗಾಡಿ ಹಾಗೂ ಟ್ರಾಕ್ಟರ್ ಗಳ ಮೂಲಕ ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಈ ಸಂಧರ್ಭದಲ್ಲಿ ನಾಮಫಲಕ ಉದ್ಘಾಟಿಸಿದ ಶ್ರೀ ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಸ್ವಾಮಿಗಳಾದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ನಂತರ ಮಾತನಾಡಿ ಹುಟ್ಟು ಬಹಳ ಸರಳ ಬದುಕು ಬಹಳ ಕಠಿಣ. ಬದುಕಿನ ಆದರ್ಶಗಳನ್ನು ಪಾಲಿಸುವುದು ಮಾನವನ ಕರ್ತವ್ಯ, ಮಾನವ ಜನ್ಮದಲ್ಲಿ ಬದುಕುವುದು ಅದೃಷ್ಟವೇ ಹೌದು. ಹೇಗಾದರೂ ಬದುಕಿದರೆ ಆಯಿತು.
ಎಂಬುದಕ್ಕಿಂತ ಹೇಗೆ ಬದುಕಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಪುನೀತ್ ರಾಜಕುಮಾರ್ ಆದರ್ಶಗಳನ್ನು ಪ್ರತಿಯೊಬ್ಬ ನಾಗರಿಕನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಪುನೀತ್ ರಾಜಕುಮಾರ್ ಇರುವಾಗ ಅವರು ಮಾಡಿದ ಸಮಾಜಮುಖೀ ಕಾರ್ಯಗಳು, ಸಹಾಯಗಳು,ಆದರ್ಶಗಳು ಗುಣಗಳು ಅವರ ಮರಣದ ನಂತರ ಸಮಾಜಕ್ಕೆ ತಿಳಿಯುತ್ತೇವೆ. ಪುನೀತ್ ರಾಜಕುಮಾರ್ ರಂತೆಯೇ ಬದುಕಿ ಸಮಾಜ ಮುಖಿ ಕಾರ್ಯಗಳನ್ನು ಮಾಡೋಣ ಎಂದರು.
ನಂತರ ಕನ್ನಡ ಧ್ವಜಾರೋಹಣವನ್ನು ನೆರವೇರಿಸಿದ ಮಾರುತಿಪುರ ಗ್ರಾಪಂ ಸದಸ್ಯರಾದ ಅವಿನಾಶ್ ಎಸ್ ಜೆ ಮಾತನಾಡಿ ಪುನೀತ್ ರಾಜ್‍ಕುಮಾರ್ ರವರು ‘ಯಾರಿಗೂ ತಿಳಿಯದ ಹಾಗೇ ಅವರು ಮಾಡಿರುವ ಸಮಾಜ ಸೇವೆ ನಿಜಕ್ಕೂ ಅವಿಸ್ಮರಣೀಯ. ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು ಹಾಗೂ ಸಾಮಾನ್ಯರಾದ ನಾವು ಅವರ ಜೀವನ ತತ್ವವನ್ನು ಅಳವಡಿಸಿಕೊಳ್ಳಬೇಕಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಆಕಾಶದೆತ್ತರಕ್ಕೆ ಬೆಳೆದಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪುನೀತ್ ಅವರನ್ನು ಜೀವಂತವಾಗಿರಿಸಲು ಪ್ರಯತ್ನಿಸಬೇಕು’ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಚನ್ನಪ್ಪ,ಪ್ರಕಾಶ್ ಗುಬ್ಬಿಗ ,ಜಯಪ್ಪ ಸಂಪಳ್ಳಿ ,ರಾಜು ಎಸ್ ಕೆ ,ಯೋಗೆಂದ್ರಪ್ಪ,ಸುಮಾ ಸುರೇಶ್ ಹಾಗೂ ಊರಿನ ಹಿರಿಯರು ಗ್ರಾಮಸ್ಥರೆಲ್ಲಾ ಉಪಸ್ಥಿತರಿದ್ದರು