ಗಂಗಾವತಿ (ಮಾರುತಿ ಮಾನ್ಪಡೆ ವೇದಿಕೆ): ಹಿಂದುತ್ವ ಮತ್ತು ಕಾರ್ಪೋರೇಟ್ ಯಜಮಾನಿಕೆಯಿಂದಾಗಿ ದೇಶದ ವಿನಾಶದ ಅಂಚಿಗೆ ಹೋಗಿದೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣದ ಮೂಲಕ ಕೇಂದ್ರದ ಬಿಜೆಪಿ ಸರಕಾರ ಕಾರ್ಪೋರೇಟ್ ಕಂಪನಿಗಳಿಗೆ ಕಾಣಿಕೆ ನೀಡುತ್ತಿದೆ.
ಇದರಿಂದ ರೈತ,ಕೃಷಿಕಾರ್ಮಿಕರು ಜನಸಾಮಾನ್ಯರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಶೋಷಣೆ ನಿರಂತರವಾಗಿ ನಡೆಯುತ್ತಿದೆ ಎಂದು ಸಿಪಿಐಎಂ ಪಕ್ಷದ ಪೊಲಿಟ್ ಬ್ಯೂರೋ ಸದಸ್ಯ ಪ್ರಕಾಶ ಕಾರಟ್ ಹೇಳಿದರು. ಕಾ. ಪ್ರಕಾಶ್ ಕಾರಟ್ ಇಂದು ಗಂಗಾವತಿಯಲ್ಲಿ ಆರಂಭಗೊಂಡ ಸಿಪಿಐ(ಎಂ) ಪಕ್ಷದ 23ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿವಮೊಗ್ಗ ಜಿಲ್ಲೆಯಿಂದ ಕಾ. ನಾರಾಯಣ್, ಕಾ. ಕೆ. ಪ್ರಭಾಕರನ್ ಹಾಗೂ ಕಾ. ತುಳಸಿ ಪ್ರಭಾ ಇವರುಗಳು ಜಿಲ್ಲಾ ಪ್ರತಿನಿಧಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.