ಶಿವಮೊಗ್ಗ: ಸದಸ್ಯರ ಸಹಕಾರ ಹಾಗೂ ಹೊಸ ಸದಸ್ಯರ ಸದಸ್ಯತ್ವ ಹೆಚ್ಚಿಸುವ ಜತೆಯಲ್ಲಿ ಸಂಘ ಮುನ್ನಡೆಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಅಧ್ಯಕ್ಷ ಮಥುರಾ ಎನ್.ಗೋಪಿನಾಥ್ ಹೇಳಿದರು.
ನಗರದ ಸಹ್ಯಾದ್ರಿ ಸ್ನೇಹ ಸಂಘದ ವತಿಯಿಂದ ಮಥುರಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾವುದೇ ಸಂಘ ಸಂಸ್ಥೆ ಸದೃಢವಾಗಿ ನಡೆಯಲು, ಪ್ರಾಮಾಣಿಕವಾಗಿ ಮುನ್ನಡೆಯಬೇಕಾದರೆ ಸದಸ್ಯರ ಸಹಕಾರ ಮತ್ತು ಹೊಸ ಹೊಸ ಸದಸ್ಯರ ಸೇರ್ಪಡೆಯು ಮುಖ್ಯ ಎಂದು ತಿಳಿಸಿದರು.

ಈಗಾಗಲೇ ಶಿವಮೊಗ್ಗ ನಗರದ ಅಭಿವೃದ್ಧಿಗೆ, ಉದ್ದಿಮೆದಾರ ಹಾಗೂ ಕೈಗಾರಿಕಾ ಸಮಸ್ಯೆಗಳ ಪರಿಹಾರಕ್ಕೆ ಆಡಳಿತ ಮಂಡಳಿಯ ಸಹಕಾರದಿಂದ ಸಂಪೂರ್ಣ ಪ್ರಯತ್ನಿಸುತ್ತೇನೆ. ಮುಂದಿನ ದಿನಗಳಲ್ಲಿ ಸಂಘದ ಎಲ್ಲರ ಸಹಕಾರದಿಂದ ಸಂಘವನ್ನು ಮುನ್ನಡೆಸೋಣ ಎಂದರು.
ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ರಾಜ್ಯದಲ್ಲಿಯೇ ಒಂದು ಮಾದರಿ ಸಂಸ್ಥೆಯಾಗಿದೆ. ಮೂರು ವರ್ಷಗಳಲ್ಲಿ ಅತ್ತುö್ಯತ್ತಮ ಸೇವೆ ಮಾಡಿದನ್ನು ನಾವೆಲ್ಲರೂ ನೋಡಿದ್ದೇವೆ ಎಂದು ಹೇಳಿದರು.

ನೂತನ ಅಧ್ಯಕ್ಷ ಎನ್.ಗೋಪಿನಾಥ್ ಅವರಿಗೆ ಸಹ್ಯಾದ್ರಿ ಸ್ನೇಹ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕ ಗಣೇಶ್ ಎಂ.ಅAಗಡಿ, ಕಾರ್ಯಕ್ರಮದಲ್ಲಿ ಡಾ. ಪರಿಸರ ನಾಗರಾಜ್, ಮಲ್ಲಿಕಾರ್ಜುನ್, ಮರುಳೇಶ್, ಸುರೇಶ್, ಜೆಸಿ ಮತ್ತು ರೋಟರಿ ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…