ಶಿವಮೊಗ್ಗ: ಮುದ್ರಕರು ಹಾಗೂ ಕಾರ್ಮಿಕರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನ ನಡೆಸಬೇಕಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.ಮಲೆನಾಡು ಮುದ್ರಕರ ಸಂಘದಿಂದ ಭಾನುವಾರ ನಗರದ ಸುವರ್ಣ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಿದ್ದ ಮುದ್ರಕರ ಹಬ್ಬದಲ್ಲಿ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮುದ್ರಣ ಉದ್ಯಮ ಸಮಾಜಸೇವೆಯಾಗಿದೆ. ಮೇಲ್ನೋಟಕ್ಕೆ ನೋಡಲು ಇದು ಸುಲಭವಾಗಿ ಕಂಡರೂ ಹೆಚ್ಚು ಪರಿಶ್ರಮದ ಕೆಲಸ ಇದಾಗಿದೆ ಎಂದರು.
ಮುದ್ರಣ ಸಮಾಜದ ಒಂದು ಭಾಗವಾಗಿದ್ದು, ಯಾವುದೇ ವಿಚಾರಗಳು ಜನರಿಗೆ ತಲುಪಲು ಮುದ್ರಣ ಅಗತ್ಯವಾಗಿದೆ. ಈ ಉದ್ಯಮ ಇಂದು ಬಹಳಷ್ಟು ಹಂತಗಳನ್ನು ದಾಟಿಕೊಂಡು ಬಂದು ಈಗ ಡಿಜಿಟಲ್ ಮಾದರಿಯಲ್ಲಿದೆ. ಇದು ಸಮಾಜಕ್ಕೆ ಶಕ್ತಿ ಕೊಡುವ ಕೆಲಸ ಆಗಿರುವುದರಿಂದ ಸರ್ಕಾರದಿಂದ ಸೌಲಭ್ಯ ದೊರಕಿಸಲು ಸಂಘಟಿತರಾಗಿ ಕೆಲಸ ಮಾಡಬೇಕಿದೆ ಎಂದರು.ಮನೋರಂಜನೆ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿದ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಎಲ್ಲಾ ಮುದ್ರಕರ ಕುಟುಂಬವನ್ನು ಒಂದೆಡೆ ಸೇರಿಸಿ ನಡೆಸುತ್ತಿರುವ ಇಂತಹ ಕಾರ್ಯಕ್ರಮ ಸಕಾಲಿಕವಾಗಿದೆ. ಇದರಿಂದಾಗಿ ವೃತ್ತಿ ಬಾಂಧವರ ಸಮ್ಮಿಲನದ ಜತೆಗೆ ಪರಸ್ಪರ ವಿಚಾರ ವಿನಿಮಯ ಆಗಲಿದೆ ಎಂದರು.ಮೊಳೆ ಜೋಡಿಸುವ ಕಾಲದಿಂದ ಹಿಡಿದು ಈಗಿನ ಡಿಜಿಟಲ್ವಿರೆಗೆ ಮುದ್ರಣಾಲಯವನ್ನು ನಡೆಸಿಕೊಂಡು ಬಂದವರೂ ಇದ್ದಾರೆ. ತಮ್ಮ ಕುಟುಂಬದವರೇ ಭಾಗಿಯಾಗಿ ಮುದ್ರಣಾಲಯ ನಡೆಸಿಕೊಂಡು ಬಂದವರೂ ಇದ್ದಾರೆ. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರ ಇಡೀ ಕೆಲಸದ ಮೇಲೆ ಪರಿಣಾಮ ಉಂಟಾಗಲಿದೆ.
ಇಂತಹ ಉದ್ಯಮ ಇನ್ನಷ್ಟು ಬೆಳೆಯುವ ನಿಟ್ಟಿನಲ್ಲಿ ಎಲ್ಲರೂ ಯತ್ನ ನಡೆಸಬೇಕಿದೆ ಎಂದರು.ಇದೇ ಸಂದರ್ಭದಲ್ಲಿ ಪುರುಷರ ಕ್ರೀಡಾಕೂಟಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್, ಮಹಿಳಾ ಕ್ರೀಡಾಕೂಟಕ್ಕೆ ಮೇಯರ್ ಸುನೀತ ಅಣ್ಣಪ್ಪ, ಮಕ್ಕಳ ಕ್ರೀಡಾಕೂಟಕ್ಕೆ ಪಾಲಿಕೆ ಸದಸ್ಯೆ ಸುರೇಖ ಮುರಳೀಧರ್ ಚಾಲನೆ ನೀಡಿದರು.ಅಲಂಕೃತ ಟಾಂಗಾ ಸವಾರಿ, ಪಾರಿವಾಳದೊಂದಿಗೆ ಫೆÇೀಟೋ ಸೆಷನ್, ಫನ್ನಿಗೇಮ್ಸ್, ಕ್ವಿಜ್, ಅಂತ್ಯಾಕ್ಷರಿ, ಗುರಿ ಇಡಿ-ಬಾಣ ಬಿಡಿ, ಅಂತ್ಯಾಕ್ಷರಿ ಮೊದಲಾದ ಮನರಂಜನೆ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಿದ್ದು, ಮುದ್ರಕರ ಕುಟುಂಬದವರು ಪಾಲ್ಗೊಂಡು ಸಂತಸ ಹಂಚಿಕೊಂಡರು.
ಸಂಘದ ಅಧ್ಯಕ್ಷ ಎಂ. ಮಾಧವಾಚಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಳಗಿ, ಮೋಹನ್, ರಮೇಶ್, ಚಂದ್ರು, ಯೋಗೇಶ್, ಸುರೇಶ್ರಾಎವ್ ನಾಡಿಗ್ ಮೊದಲಾದವರು ಇದ್ದರು.ಬಾಕ್ಸ್ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ಈ ಸಂದರ್ಭದಲ್ಲಿ ಆಯೋಜಿಸಿದ್ದು, ಅತ್ಯಂತ ಆಕರ್ಷಕವಾಗಿತ್ತು. ವನ್ಯಜೀವಿಗಳು, ಪಕ್ಷಿಗಳನ್ನೊಳಗೊಂಡ ಛಾಯಾಚಿತ್ರಗಳು ಗಮನ ಸೆಳೆದವು.