ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಛಾದಿಂದ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು.
(1831-1897) ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ,
ಆಧುನಿಕ ಶಿಕ್ಷಣದ ತಾಯಿ ಆಗಿದ್ದರು.

ಈ ಮಹಾತಾಯಿಯ ಹುಟ್ಟುಹಬ್ಬವನ್ನು, ಶಿವಮೊಗ್ಗ ನಗರ ಮಹಿಳಾ ಮೋರ್ಛಾದ ವತಿಯಿಂದ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾವಿತ್ರಿಪುಲೆ ರವರ ಜೀವನ ಇತಿಹಾಸ, ಮಹಿಳಾ ವಿದ್ಯಾರ್ಜನೆಗಾಗಿ ಅವರ ಕಾರ್ಯವೈಖರಿಯನ್ನು ಕೃತಜ್ಞತಾ ಪೂರ್ವಕವಾಗಿ ನೆನಪಿಸಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಛಾ ನಗರಾಧ್ಯಕ್ಷೆ ಶ್ರೀಮತಿ ಸುರೇಖ ಮುರಳೀಧರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಶ್ರೀನಿವಾಸ್, ಶ್ರೀಮತಿ ಆರತಿ ಪ್ರಕಾಶ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ರೇಣುಕಾ ನಾಗರಾಜ್, ನಗರ ಉಪಾಧ್ಯಕ್ಷರಾದ ಶ್ರೀಮತಿ ಉಮಾ ಮೂರ್ತಿ, ರಾಧಾ ರಾಮಚಂದ್ರ, ಅನಿತಾ, ವರಲಕ್ಷ್ಮಿ, ಕರಿಬಸಮ್ಮ, ಯಶೋಧ ಭೋಗೇಶ್, ಪುಷ್ಪ, ರಶ್ಮಿ ಶಿವಕುಮಾರ್, ಶಕುಂತಲಾ, ಯಶೋಧ, ಸೌಭಾಗ್ಯ, ಸುಧಾಮಣಿ, ಸಂಗೀತ ನಾಗರಾಜ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…