ಶಿವಮೊಗ್ಗ: ಗ್ರಾಮೀಣಾಭಿವೃದ್ಧಿಯ ನಿರೀಕ್ಷೆ ಇಟ್ಟುಕೊಂಡಿರುವ ನಾನು ಅದನ್ನು ಸಾಕಾರ ಮಾಡುವ ನಿಟ್ಟಿನತ್ತ ಸಂಕಲ್ಪ ಮಾಡುವೆ ಎಂದು ಹೊಸದಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.ಅವರು ಇಂದು ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಗ್ರಾಮೀಣ ಪ್ರದೇಶದಲ್ಲಿ ಹಲವು ಸಮಸ್ಯೆಗಳಿವೆ ಎಂಬುದು ನಿಜ. ಪ್ರಮುಖವಾಗಿ ಗ್ರಾಮ ಪಂಚಾಯಿತಿಗಳನ್ನು ಗಟ್ಟಿಗೊಳಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಮುಖವಾಗಿ ನೆಟ್ವಾರ್ಕಿಂಗ್ ಸಮಸ್ಯೆ ಇದೆ. ಮತ್ತು ಗ್ರಾಮ ಪಂಚಾಯಿತಿಗಳು ಡಿಜಿಟಲ್ ಆಗಬೇಕಾಗಿದೆ. ಆ ನಿಟ್ಟಿನತ್ತ ತಾವು ಪ್ರಮಾಣಿಕವಾಗಿ ಪ್ರಯತ್ನಿಸುವೆ. ಇದರಿಂದ ಕಚೇರಿಯ ಎಲ್ಲಾ ಕೆಲಸಗಳು ಸುಲಭವಾಗಿ ಆಗುತ್ತವೆ. ಕೇವಲ ಮೊಬೈಲ್ ಸೇವೆ ಸಿಕ್ಕರೆ ಸಾಲದು, ವೈಫೈ ಸೇವೆ ಶಕ್ತಿಯುತವಾಗಬೇಕಾಗಿದೆ. ಎಲ್ಲಾ ನೆಟ್ವಾರ್ಕ್ಗುಳು ಸುಲಭವಾಗಿ ಮತ್ತು ಹೆಚ್ಚು ಪ್ರಸಾರಯುಕ್ತವಾಗಿ ಆದರೆ ಹೆಚ್ಚು ಅನುಕೂಲವಾಗುತ್ತದೆ. ಇದಕ್ಕೆ ಆದ್ಯತೆ ಕೊಡುವುದಾಗಿ ಹೇಳಿದರು.

ನನ್ನ ಕ್ಷೇತ್ರದಲ್ಲಿ ಸುಮಾರು 362 ಗ್ರಾಮ ಪಂಚಾಯಿತಿಗಳು ಬರುತ್ತವೆ. ಶೇ.50 ರಷ್ಟು ಡಿಜಿಟಲ್ಕರಣ ಇದ್ದರೂ ಕೂಡ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಗ್ರಾಮ ಪಂಚಾಯಿತಿಗಳ ಮೂಲಕವೇ ವಿವಿಧ ಬಗೆಯ ಪ್ರಮಾಣ ಪತ್ರಗಳು ಲಭ್ಯವಾದರೆ ಸಾರ್ವಜನಿಕರಿಗೆ ನಗರಕ್ಕೆ ಬರುವುದು ತಪ್ಪುತ್ತದೆ. ಸಮಯ ಉಳಿತಾಯವಾಗುತ್ತದೆ. ಕೆಲಸಗಳು ಬೇಗ ಆಗುತ್ತವೆ ಎಂದರು.ಗ್ರಾಮೀಣಾಭಿವೃದ್ಧಿಗಾಗಿ ವಿಧಾನ ಪರಿಷತ್ ಸದಸ್ಯನಾಗಿ ತಮಗಿರುವ ಅಧಿಕಾರದ ಜೊತೆಗೆ ಸರ್ಕಾರಕ್ಕೆ ನೀಡಬಹುದಾದ ಸಭೆಗಳನ್ನು ಬಳಸಿಕೊಂಡು ಗ್ರಾ.ಪಂ.ಗಳ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಚರ್ಚಿಸಿ ಸರ್ಕಾರದ ಅನುದಾನಗಳ ಬಿಡುಗಡೆಗೆ ಮತ್ತು ವಿಶೇಷ ಅನುದಾನಗಳ ಬಿಡುಗಡೆಗೆ ಪ್ರಯತ್ನ ಪಡುತ್ತೇನೆ. ಇದಕ್ಕಾಗಿ ಪ್ರತಿ ಗ್ರಾ.ಪಂ.ಗಳಿಗೂ ಭೇಟಿ ನೀಡುತ್ತೇನೆ. ಮೂಲಭೂತ ಸಮಸ್ಯಗಳಾದ ವಿದ್ಯುತ್, ನೀರು, ಕೆರೆ ಒತ್ತುವರಿ, ಅರಣು ಮತ್ತು ಕಂದಾಯ ಭೂಮಿಗಳ ಸಮಸ್ಯೆಗಳು, ಬಗರುಹುಕುಂ ಸಮಸ್ಯೆ ಇವುಗಳತ್ತ ಕೂಡ ಗಮನಹರಿಸುವೆ ಎಂದರು.

ಮನೆಯಿಂದ ಸಂಸ್ಕಾರ ಕಲಿತೆ:

ಮನೆಯಿಂದಲೇ ನಾನು ಸಂಸ್ಕಾರ ಕಲಿತಿದ್ದು ಎಂದು ಹೇಳಿದ ಅರುಣ್, ನಮ್ಮ ತಂದೆ ರಾಜಕಾರಣದಲ್ಲಿ ಇರುವಾಗ ನಾನು ಚಿಕ್ಕಮಗು, ಆಗ ಮನೆಗೆ ಮುರುಳಿ ಮನೋಹರ ಜೋಶಿ ಸೇರಿದಂತೆ ಆರ್ಎಾಸ್ಎ ಸ್ ನಾಯಕರು ಬಂದು ಒಂದೆರಡು ದಿನ ಉಳಿದುಕೊಳ್ಳುತ್ತಿದ್ದರು. ಆಗಲೇ ನಾನು ಅವರ ಜೊತೆ ಮಾತನಾಡುತ್ತಿದ್ದೆ ಎಂದು ನೆನೆಪು ಮಾಡಿಕೊಂಡರು. ಅಮ್ಮನಿಗೆ ರಾಜಕೀಯ ಕ್ಷೇತ್ರ ಅಷ್ಟಕಷ್ಟೆ. ಆದರೆ, ಅಪ್ಪಾಜಿ ಮತ್ತು ಅಪ್ಪಾಜಿಯ ಗೆಳೆಯರು ಇವರೆಲ್ಲರ ಪ್ರೀತಿಗೆ ಒಗೊಟ್ಟು ರಾಜಕಾರಣಕ್ಕೆ ಬಂದಿದ್ದಾಯಿತು ಎಂದರು.ಪಕ್ಷ ಹಲವು ಬಗೆಯ ಹುದ್ದೆಗಳನ್ನು ನನಗೆ ನೀಡಿದ್ದು, ನಿಗಮದ ಅಧ್ಯಕ್ಷನೂ ಆದೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಕೂಡ ಸಿಕ್ಕಿತ್ತು. ಇದು ನನ್ನ ಅದೃಷ್ಟವೇ ಎಂದು ಹೇಳಬೇಕು. ಪಕ್ಷ ನನ್ನ ಗುರುತಿಸಿತ್ತು. ಆದರೂ ಅರುಣ್ ಅವರಿಗೆ ಜಾರಿ ಬಲವಿಲ್ಲ. ವೈಟ್ಕಾದಲರ್ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಅದರೆ ಅವುಗಳನ್ನು ದಾಟಿ ಕಾರ್ಯಕರ್ತರ ಜೊತೆಗೆ ಇಟ್ಟುಕೊಂಡು ಧೈರ್ಯವಾಗಿ ಚುನಾವಣೆಗೆ ದುಮುಕಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುಮಾರು 5 ದಿನಗಳ ಕಾಲ ಕ್ಷೇತ್ರದಲ್ಲಿ ತಮ್ಮ ಪರ ಪ್ರಚಾರಕ್ಕೆ ಬಂದರು. ಇದು ಟೇಕಪ್ ಆಗಲು ಕಾರಣವಾಯಿತು. ನಂತರ ಗ್ರಾ.ಪಂ.ಸದಸ್ಯರ ನೇರ ಸಂಪರ್ಕ ನನಗೆ ಸಿಕ್ಕಿತ್ತು. ಜಿಲ್ಲಾ ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸುವಾಗ ಗ್ರಾಮೀಣ ಭಾಗದ ಸಂಪರ್ಕ ಕೂಡ ನನಗೆ ಇತ್ತು. ಸಚಿವರು, ಸಂಸದರು, ಕಾರ್ಯಕರ್ತರು ಎಲ್ಲರ ಸಹಕಾರದಲ್ಲಿ ಗೆದ್ದು ಬಂದೆ ಎಂದರು. ಪ್ರ್ರಾಸ್ತಾವಿಕವಾಗಿ ಮಾತನಾಡಿದ ಪ್ರೆಸ್ಟ್ರಿಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಡಿ.ಎಸ್. ಅರುಣ್ ಅವರ ಕುಟುಂಬವೇ ಅತ್ಯಂತ ಸಜ್ಜನಿಕೆಯ ಕುಟುಂಬವಾಗಿದೆ. ಅವರ ತಂದೆ ಡಿ.ಹೆಚ್.ಶಂಕರಮೂರ್ತಿ ಅವರು ಆರ್ಎ.ಸ್ಎ್ಸ್ ಮೂಲದವರು. ಹಲವು ರಾಜಕಾರಣಿಗಳಿಗೆ ಆಶ್ರಯ ನೀಡಿದವರು. ಅರುಣ್ ಅವರು ಈಗ ಎಂಎಲ್ಸಿಷ ಆಗಿದ್ದಾರೆ. ಅವರ ಮುಂದೆ ಸಾಕಷ್ಟು ಸವಾಲುಗಳಿವೆ. ಅವರು ಪ್ರೀತಿಯಿಂದಲೇ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂಬ ನಂಬಿಕೆಯೂ ಇದೆ ಎಂದರು.ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಎಸ್. ಯಡಗೆರೆ ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ…