ಬೊಮ್ಮನಕಟ್ಟೆ ಕೊನೆಯ ಬಸ್ ನಿಲ್ದಾಣದಿಂದ ಚಾನಲ್ ಬ್ರಿಡ್ಜ್ ವರೆಗೆ ತುರ್ತಾಗಿ ರಸ್ತೆ ಅಭಿವೃದ್ದಿಗೆ ಕೆ.ಆರ್.ಐ.ಡಿ.ಎಲ್. ನಿಂದ 550 ಮೀಟರ್ ಉದ್ದದ ರಸ್ತೆಗೆ ಅನುಮೋದನೆ ಸಿಕ್ಕಿದ್ದರು ಕೆಲಸ ವಿಳಂಬವಾಗುತ್ತಿದೆ.

6 ವರ್ಷದ ಹಿಂದೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದಂತೆ ಕೆ.ಆರ್.ಐ.ಡಿ.ಎಲ್ ಗೆ ಯಾವುದೇ ರೀತಿಯಾದ ಕಾಮಗಾರಿಯನ್ನು ಹಾಗೂ ಕಾಮಗಾರಿಗೆ ಹಣವನ್ನು ಕೊಡಬಾರದು ಎಂದು ತೀರ್ಮಾನಿಸಲಾಗಿತ್ತು. ಕೆ.ಆರ್.ಐ.ಡಿ.ಎಲ್ ಗೆ ಕೊಟ್ಟರೆ ಶೇಕಡ 26% ಹಣವನ್ನು ಕಛೇರಿಯ ಉಪಯೋಗಕ್ಕಾಗಿ ತೆಗೆದುಕೊಳ್ಳುತ್ತಾರೆ ಇದರಿಂದ ಹೆಚ್ಚು ಹೊರೆ ಆಗುತ್ತದೆ. ಇದರಿಂದ ಪಾರದರ್ಶಕ ನಿಯಮವನ್ನು ಗಾಳಿಗೆ ತೂರಿದಂತಾಗುತ್ತದೆ ರಾಜಕಾರಣಿಗಳ ಒತ್ತಡದಿಂದ ಕೇವಲ ಕೆಲವೇ ಗುತ್ತಿಗೆದಾರರಿಗೆ ಕೆಲಸ ಮಾಡಲು ಮಾತ್ರ ಅವಕಾಶವಾಗುತ್ತದೆ ಮೇಲೆ ಸೂಚಿಸಿರುವ ಕಾಮಗಾರಿಗೆ ಅಂದಾಜು 28.60 ಲಕ್ಷ ರೂಪಾಯಿ ಆಗಿರುತ್ತದೆ.

ಈ ಕಾಮಗಾರಿಯು ಪಾಲಿಕೆಯ ಯಾವುದೇ ಸಭೆಯಲ್ಲಿ ಅನುಮೋದನೆಯಾಗಿರುವುದಿಲ್ಲಾ ಆದರೆ ಏಕಾಏಕಿ ಕೆಲವು ರಾಜಕೀಯ ಪ್ರಭಾರಿಗಳ ಒತ್ತಡಕ್ಕೆ ಮಣಿದು ಈ ರೀತಿ ನಿರ್ಧಾರಗಳು ಸಾಮಾನ್ಯ ಸಭೆಯ ನಿರ್ಣಯ ವಿರುದ್ದ ನಿರ್ಧಾರ ತೆಗೆದುಕೊಂಡಿರುವುದು ಆಡಳಿತ ಪಕ್ಷವಾದ ಬಿಜೆಪಿ ಕಣ್ಣು ಮುಚ್ಚಿ ಕುಳಿತಿರುವುದೇ ಇದರ ಸಾಕ್ಷಿ. ಪಾಲಿಕೆಯಲ್ಲಿ ಸಣ್ಣ ಪುಟ್ಟ ಕಾಮಗಾರಿಗಳಿಗೆ ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರು ಕೇಳಿದಾಗ ಹಣವಿಲ್ಲವೆಂದು ಉತ್ತರಿಸುತ್ತಾರೆ ಆದರೆ ಸಾಮನ್ಯ ನಿಧಿಯಿಂದ ಈ ರೀತಿ ಹಣವನ್ನು ಸಭೆಯ ಅನುಮೋದನೆ ತೆಗೆದುಕೊಳ್ಳದೆ ಮಾಡಿರುವವರ ವಿರುದ್ದ ಸೂಕ್ತ ಕ್ರಮ ತೆಗೆಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕರಾದ ಯಮುನಾ ರಂಗೇಗೌಡ ಸದಸ್ಯರಾದ H C ಯೋಗೇಶ್, ಶಾಮಿರ್ ಖಾನ್, ಮೇಹಕ್ ಷರೀಫ್, ರೇಖಾ ರಂಗನಾಥ್,R.C. ನಾಯಕ್, ರಂಗನಾಥ್, ಆಸಿಫ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…