ಶಿವಮೊಗ್ಗ ಜಿಲ್ಲೆಯಲ್ಲಿ ಡಿಸೆಂಬರ್ 10 ರಂದು ಬೀದಿ ಬದಿ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ದಿನಾಂಕ: 06/12/21 ರಂದು ಅಭಿಯಾನ ನೀರ್ದೆಶಕರು, ಜೀವನೋಪಾಯ ಸಂಕ್ಷಣೆಯ ಅಧಿಕಾರಿಗಳಾದ ಶ್ರೀಮತಿ ಮಂಜುಶ್ರೀ ಐಎಎಸ್ ರವರು, ನಮ್ಮಲ್ಲ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಶಿವಮೊಗ್ಗ ಡಿಸಂಬರ್ 10 ಬಂದ್ ಹಿಂಪಡೆಯಲಾಯಿತು.
ಇದೇ 20/01/2022 ರಂದು ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯೆಂದು ಕರ್ನಾಟಕ ರಾಜ್ಯದ ಬೀದಿ ಬದಿ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ, ವಿವಿಧ ಬೇಡಿಕೆ ಹಾಗೂ ನಿಗಮ ಮಂಡಳಿ ರಚನೆಗಾಗಿ ಬೆಂಗಳೂರಿನಲ್ಲಿ 20 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರು ಸೇರಿ ಟೌನ್ ಹಾಲ್ ನಿಂದ ಪಾದಯಾತ್ರೆ ಬೃಹತ್ ರಾಲಿ ಮೂಲಕ ಫ್ರೀಡಂ ಪಾರ್ಕಿನಲ್ಲಿ ಸಭೆಯ ಸನ್ಮಾನ್ಯ ಮುಖ್ಯಮಂತ್ರಿ ರವರಿಗೆ ಮನವಿ ನೀಡಲು ಪೊಲೀಸ್ ಇಲಾಖೆಗೆ ಅನುಮತಿಗಾಗಿ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀ ಸಿಈ ರಂಗಸ್ವಾಮಿ ರವರು ಮನವಿ ಸಲ್ಲಿಸಲಾಯಿತು.
ಆದರೆ ಕೊವೀಡ್ 19, ಮೂರನೇ ಅಲೆಯ ಕಾರಣದಿಂದ ಪೊಲೀಸ್ ಇಲಾಖೆಯು ಅನುಮತಿ ನೀಡಲು ನಿರಾಕರಿಸಿರುತ್ತಾರೆ. ಅದರಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳ ಸ್ವಯಂ ಪ್ರೇರಿತ ಬಂದ್ ಪ್ರತಿಭಟನೆಯು ರದ್ದಾಗಿದೆ ಎಂದು ತಿಳಿಸುತ್ತಿದ್ದೇವೆ.