ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ದುರಾಡಳಿತ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಪಾಲಿಕೆಯ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜನವಿರೋಧಿ ಆಡಳಿತದ ಮುಖಾಂತರ ಅಧಃಪತನದತ್ತ ಸಾಗಿದೆ. ಅಧಿಕಾರಿಗಳ ಶಾಹಿಗಳ ಕೈಗೆ ಆಡಳಿತ ಒಪ್ಪಿಸಿ ಕಮಿಷನ್ ದಂಧೆಗೆ ಶಾಮಿಲಾಗಿ ಏಜೆಂಟರಾಗಿ ಭ್ರಷ್ಟಾಚಾರ ದಿವಾಳಿಯ ಅರಾಜಕತೆ ತಾಂಡವಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಆಸ್ತಿ ತೆರಿಗೆ ಮತ್ತು ಖಾತೆ ಬದಲಾವಣೆಯ ಪ್ರಕ್ರಿಯೆಯಲ್ಲಿ ಬಿಜೆಪಿಯ ಸದಸ್ಯರು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಪ್ರಕರಣಗಳು ಹೆಚ್ಚಾಗುತ್ತಿವೆ. ನಾಗರೀಕರು ನೇರವಾಗಿ ಪಾಲಿಕೆಗೆ ಹೋದರೆ ಅಲ್ಲಿಯ ನೌಕರರು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಬಿಜೆಪಿ ಆಡಳಿತವೇ ಕಾರಣವಾಗಿದೆ. ಲಂಚ ನೀಡದಿದ್ದರೆ ನಾಗರೀಕರ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದರು.ಪಾಲಿಕೆ ಆಡಳಿತವು ಶಾಸಕ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪರವರ ಕಪಿಮುಷ್ಠಿಯಲ್ಲಿರುವ ಪಾಲಿಕೆ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ಮೀತಿ ಮೀರಿದೆ. ಈಗ ನಗರದಲ್ಲಿ ನಡೆಯುತ್ತಿರುವ ಕಾಮಗಾರಿ ಕೆಲಸಗಳು ಕಳಪೆಯಿಂದ ಕೂಡಿದೆ. ಕುಡಿಯುವ ನೀರಿನ ಸರಬರಾಜು ಅವ್ಯವಸ್ಥೆಯಿಂದ ನೀರು ವ್ಯತ್ಯಯವಾಗುತ್ತಿದೆ.
ಒಳಚರಂಡಿ ಮತ್ತು ಮ್ಯಾನ್ಫೋ್ಲ್ಗುಳು ಬಾಯಿ ಬಿಟ್ಟುಕೊಂಡು ಮಾನವನನ್ನು ನುಂಗಲು ಕಾದು ಕುಳಿತಿವೆ. ಕಾಮಗಾರಿ ಆರಂಭಿಸಲು ನಿರ್ಧಿಷ್ಟ ನೀತಿ-ನಿಯಮಗಳು ಇಲ್ಲವೇ ಇಲ್ಲ. ಎಲ್ಲಾ ವ್ಯವಹಾರಗಳು ಕಮಿಷನ್ ದಂಧೆಯಲ್ಲಿ ಸೀಮಿತವಾಗಿದೆ ಎಂದು ದೂರಿದರು.ಆಶ್ರಯ ಯೋಜನೆಯ ಮನೆಗಳ ನಿರ್ಮಾಣ ನೆನೆಗುದ್ದಿಗೆ ಬಿದ್ದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮೇಯರ್ ಸಭೆಗಳನ್ನು ನಡೆಸಿ ಮನೆಗಳನ್ನು ನಾಳೆ ಕೊಡುತ್ತೇವೆ, ನಾಡಿದ್ದು ಕೊಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಕರೋನಾದಿಂದಾಗಿ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ.
ಕೊಳಚೆ ನಿರ್ಮೂಲನ ಮಂಡಳಿಯಿಂದ ಕೊಳಚೆ ಪ್ರದೇಶದಲ್ಲಿ ವಾಸವಾಗಿದ್ದ ಬಡವರಿಂದ ತಲಾ 75 ಸಾವಿರ ರೂ. ಹಣ ಕಟ್ಟಿಸಿಕೊಂಡು 3 ವರ್ಷವಾದರೂ ಹಣವೂ ಇಲ್ಲ, ಮನೆಯೂ ಇಲ್ಲದೆ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.ಸ್ಮಾರ್ಟ್ಸಿಡಟಿ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದು, ನಗರದೆಲ್ಲೆಡೆ ರಸ್ತೆಗಳು ಧೂಳುನಿಂದ ವಿಲೇವಾರಿಯಾಗದೆ ಧೂಳಿನಿಂದ ಜನರು ನಿತ್ಯ ಅಲರ್ಜಿಯಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಾಲಿಕೆ ಆಸ್ತಿಗಳ ಕಬಳಿಕೆ ಮತ್ತು ಒತ್ತುವರಿಯಾಗುತ್ತಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. 24×7 ನೀರು ಸರಬರಾಜು ಮಾಡಲು ಯೋಜನೆಯಲ್ಲಿ ಬಳಸಿರುವ ಪೈಪ್ ಹಾಗೂ ಉಪಕರಣಗಳು ಕಳಪೆಗುಣಮಟ್ಟದಾಗಿದ್ದು, ಈ ಯೋಜನೆ ಆರಂಭವಾಗಿ 3ವರ್ಷವಾದರೂ ಪೂರ್ಣವಾಗದಿದ್ದರೂ ಹೆಚ್ಚು ಮೊತ್ತದ ಬಿಲ್ ಪಾವತಿಸುವಂತೆ ಒತ್ತಡ ಹೇರಲಾಗುತ್ತಿದೆ ಹಾಗೂ ನಗರದ ವಿವಿಧೆಡೆಯಲ್ಲಿರುವ ಶುದ್ದ ನೀರಿನ ಘಟಕಗಳು ದುರಸ್ತಿ ಕಾಣದೆ ಪಾಳುಬಿದ್ದಿವೆ. ಹಸೀರಿಕರಣ ಯೋಜನೆಯಡಿ ಜನರ ತೆರಿಗೆ ಹಣ ಪರಿಸರದ ಹೆಸರಿನಲ್ಲಿ ಲೂಟಿಯಾಗಿದೆ.
ಪಾಲಿಕೆಯ ಕಚೇರಿಯಲ್ಲಿ ದಾಖಲೆಗಳನ್ನು ಪಡೆಯಲು ಲಂಚವಿಲ್ಲದೆ ಸಾಧ್ಯವಾಗುತ್ತಿಲ್ಲ. ರಾಜಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದರೂ ವಿಲೇವಾರಿ ಮಾಡುತ್ತಿಲ್ಲ. ಇವೆಲ್ಲವನ್ನು ನೋಡಿದರೆ ಬಿಜೆಪಿ ಆಡಳಿತ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಹೆಚ್.ಸಿ.ಯೋಗೀಶ್, ಬಿ.ಎ.ರಮೇಶ್ ಹೆಗ್ಡೆ, ರೇಖಾ ರಂಗನಾಥ್, ಮಹೇಖ್ ಷರೀಫ್, ಮಂಜುಳಾ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಎಲ್.ರಾಮೇಗೌಡ, ಸಿ.ಎಸ್.ಚಂದ್ರಭೂಪಾಲ, ಇಕ್ಕೇರಿ ರಮೇಶ್, ಎಸ್.ಪಿ.ಶೇಷಾದ್ರಿ, ಯು.ಶಿವಾನಂದ್, ದೀಪಕ್ ಸಿಂಗ್, ಚಂದನ್, ಸುವರ್ಣ ನಾಗರಾಜ್, ಕೆ.ರಂಗನಾಥ್, ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ ಸೌಗಂಧಿಕಾ ರಘುನಾಥ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಪ್ರವೀಣ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಪ್ರೇಮಾ ಶೆಟ್ಟಿ, ಎನ್.ಡಿ. ಪ್ರವೀಣ್ ಭಾಗವಹಿಸಿದ್ದರು.