ಶಿವಮೊಗ್ಗ: ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿರುವುದು ಅಭಿನಂದನೀಯ. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಬೀರನಕೆರೆ ಶಾಲೆಗೆ ನೀಡಿರುವ ಕೊಡುಗೆ ಅಪಾರ ಎಂದು ಬಿಇಒ ನಾಗರಾಜ್ ಹೇಳಿದರು.
ತಾಲೂಕಿನ ಬೀರನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಹಾಗೂ ಅಕ್ವೀನ್ ಫೈನಾನ್ಸಿಯಲ್ ಸಲ್ಯೂಷನ್ ಸಂಸ್ಥೆ ವತಿಯಿಂದ ನಲಿಕಲಿ ಟೇಬಲ್ ಹಾಗೂ ಶಾಲಾ ಬ್ಯಾಗ್‌ಗಳ ವಿತರಣೆ ಹಾಗೂ ಎಸ್‌ಎಲ್‌ಎನ್ ಎಲೆಕ್ಟ್ರಾನಿಕ್ಸ್ ಕಂಪ್ಯೂಟರ್ ವಿತರಿಸಲಾಯಿತು.
ಇದೇ ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ಸ್ನೇಹಿತರನ್ನು ಒಳಗೊಂಡು ವಿದ್ಯಾರ್ಥಿಗಳ ಸಂಘದಿAದ ಶಾಲೆ ದುರಸ್ತಿ ಕಾರ್ಯ ಹಾಗೂ ಶಾಲೆಗೆ ಹೊಸ ವಿನ್ಯಾಸವನ್ನು ಮಾಡುತ್ತಿರುವುದು ಎಂದಿಗೂ ಮರೆಯಲು ಸಾಧ್ಯವಿಲ್ಲ. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಂಪ್ಯೂಟರ್ ನೀಡಿರುವುದು ಅನುಕೂಲವಾಗಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಬೀರನಕೆರೆ ಸರ್ಕಾರಿ ಶಾಲೆಯನ್ನು ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿಗಳು ಜಿಲ್ಲೆಗೆ ಮಾದರಿ ಶಾಲೆಯನ್ನಾಗಿ ಮಾಡುವಲ್ಲಿ ಪಣತೊಟ್ಟಿದ್ದಾರೆ. ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವದ ವತಿಯಿಂದ ಶಾಲಾ ಮಕ್ಕಳಿಗೆ ನಲಿಕಲಿ ಟೇಬಲ್ ಹಾಗೂ ಚೇರುಗಳು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಅನುಕೂಲ ಮಾಡುವುದು ರೋಟರಿ ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಶಾಲೆಯ ವಿದ್ಯಾರ್ಥಿ ಸಂಘದ ಪ್ರಮುಖರಾದ ಸತೀಶ್ ಚಂದ್ರ, ಸಂತೋಷ್ ಕುಮಾರ್, ಶಿವನಾಯಕ್ ಹಾಗೂ ಇತರರು ಜವಾಬ್ದಾರಿಯುತವಾಗಿ ಶಾಲೆಯ ಅಭಿವೃದ್ಧಿಯ ಕಡೆ ಕೆಲಸ ಮಾಡಿಸುತ್ತಿದ್ದ ಅವರಿಗೆ ಸಾಕಾರ ರೋಟರಿ ಸಂಸ್ಥೆಯಿAದ ಸದಾ ಇರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಂಸ್ಥೆಯಾದ ಅಕ್ವೀನ್ ಫೈನಾನ್ಸಿಯಲ್ ಸಲ್ಯೂಷನ್ ಸಂಸ್ಥೆಯ ಪ್ರಮುಖರಾದ ಬಸಯ್ಯ ಹಿರೇಮಠ್ ಅವರು ಶಾಲಾಮಕ್ಕಳಿಗೆ ಬ್ಯಾಗ್‌ಗಳನ್ನು ವಿತರಣೆ ಮಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬ್ಯಾಗ್ ಕೊಡುತ್ತಿರುವುದು ಸಂತೋಷವಾಗಿದೆ. ನಮ್ಮ ಸಂಸ್ಥೆಯಿAದ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೆ ಅನುಕೂಲ ಮಾಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಲ್‌ಎನ್ ಎಲೆಕ್ಟಾçನಿಕ್ಸ್ ಮುಖ್ಯಸ್ಥ ವಿ.ಜಿ.ಲಕ್ಷಿö್ಮÃನಾರಾಯಣ ಅವರು ಶಾಲೆಗೆ ಕಂಪ್ಯೂಟರ್ ನೀಡಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನಗರದ ಶಾಲೆಯ ಮಕ್ಕಳಿಗೆ ಸಿಗುವಂತಹ ಅನುಕೂಲಗಳು ಹಳ್ಳಿಗಳಲ್ಲಿ ಸಿಗಬೇಕು. ಅದಕ್ಕೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಸಂಘ ಸಂಸ್ಥೆಗಳ ನೆರವಿನಿಂದ ಶಾಲೆ ಪಡೆದುಕೊಂಡು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಲಾ ಸಿಬ್ಬಂದಿ ಹಾಗೂ ಸತೀಶ್‌ಚಂದ್ರ ಅವರಿಗೂ ಧನ್ಯವಾದ ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಸಮುದಾಯ ಸೇವೆಗಳ ನಿರ್ದೇಶಕ ಜಿ.ವಿಜಯ್‌ಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹಲವಾರು ಅನುಕೂಲ ಮಾಡುತ್ತಾ ಬಂದಿದೆ. ಬೀರನಕೆರೆ ಶಾಲೆಗೆ ಪ್ರತಿವರ್ಷ ಸಂಸ್ಥೆಯಿAದ ಕೊಡುಗೆ ನೀಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಮಾದರಿ ಶಾಲೆಯನ್ನಾಗಿ ಮಾಡುವಲ್ಲಿ ರೋಟರಿ ಸಂಸ್ಥೆಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗದ ಸಿದ್ದೇಶ್ವರ ಫರ್ನಿಚರ್ಸ್ ಸಂಸ್ಥೆಯ ಅಭಿಷೇಕ ಅವರು ಶಾಲೆಗೆ 20 ಕುರ್ಚಿಗಳನ್ನು ನೀಡಿದರು. ಶಾಲೆಯ ಶಿಕ್ಷಕ ಸಿದ್ದಪ್ಪ ವಂದನಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಇಸಿಒ ಮೋಹನ್ ಕುಮಾರ್, ಇಂದ್ರಕುಮಾರ್, ಶಾಲೆಯ ಮುಖ್ಯಶಿಕ್ಷಕ ಬಸವರಾಜ್ ಹಿರೇಮಠ್, ಹಳೆ ವಿದ್ಯಾರ್ಥಿ ಸಂಘದ ಮುಖ್ಯಸ್ಥ ಸತೀಶ್ ಚಂದ್ರ, ಸಂತೋಷ್ ಕುಮಾರ್, ಶಿವನಾಯಕ್, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರನಾಯಕ್, ಶಿಕ್ಷಕಿ ಶೋಭಾ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.