ಕೋಲಾರ,ಜ.೧೦: ಕನ್ನಡ ನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದವರು ಚಂಪಾ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್ ಅಭಿಪ್ರಾಯಪಟ್ಟರು.
ಜಯ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಕೋಲಾರ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ರಾಜ್ ಕುಮಾರ್ ಜೋಡಿ ರಸ್ತೆಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಚಂದ್ರಶೇಖರ್ ಪಾಟೀಲ್ ಶ್ರದ್ದಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಒಂದು ನಿಮಿಷಗಳ ಕಾಲ ಮೌನಾಚರಿಸಿ ನಂತರ ಮಾತನಾಡಿದ ಅವರು, ಚಂದ್ರಶೇಖರ್ ಪಾಟೀಲ್ ರವರು ೧೯೩೯ರ ಜೂನ್ ೧೮ ರಂದು ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ಜನಿಸಿದ ಅವರು ಇಂದು ಬೆಳಿಗ್ಗೆ ಬೆಂಗಳೂರು ನಗರದ ಕೋಣನಕುಂಟೆಯ ಆಸ್ಟ್ರಾ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬರು ಪುತ್ರಿ ಇದ್ದಾರೆ. ಚಂಪಾ ಎಂದೇ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ ಅವರು ಸಾಹಿತ್ಯ ಕೃಷಿಯ ಜತೆಗೆ ನಾಡು, ನುಡಿ, ನೆಲಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರು. ಚಂಪಾ ಅವರ ಅಗಲಿಕೆ ನಾಡಿಗೆ ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಕುಟುಂಬಕ್ಕೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.
ವಪ್ಪಚ್ಚನಹಲ್ಲಿ ಟೈಗರ್ ವಿ.ಎಂ ವೆಂಕಟೇಶ್ ಮಾತನಾಡಿ, ಕನ್ನಡ ನಾಡಿನ ಕವಿ ನಾಟಕಕಾರ ಆಡಳಿತಗಾರ ಪ್ರತಿಭಟನಾಕಾರ ಸಂಪಾದಕರಾಗಿ ಆನೇಕ ಕ್ಷೇತ್ರಗಳಲ್ಲಿ
“ಚಂಪಾ”ರವರು ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ ಎಂದು ನುಡಿದರು,
ಜಯ ಕರ್ನಾಟಕ ಜಿಲ್ಲಾ ಮುಖಂಡ ಜಿ. ಚಂದ್ರಶೇಖರ್ ಮಾತನಾಡಿ, ಚಂದ್ರಶೇಖರ ಪಾಟೀಲರು ಕನ್ನಡದ ಮಹಾನ್ ಕವಿ ಸಾಹಿತಿ ಇವರು ೧೯೩೯ರಲ್ಲಿ ಹಾವೇರಿ ಜಿಲ್ಲೆ ಹತ್ತಿಮುತ್ತುರಿನಲ್ಲಿ ಜನಿಸಿ ೧೯೫೬ರಲ್ಲಿ ಅಧ್ಯಾಪಕರಾಗಿ ಸೇವೆ ಆರಂಭಿಸಿ ಆನೇಕ ಕೃತಿ ನಾಟಕ ಗ್ರಂಥಗಳನ್ನ ರಚಿಸಿ ೧೯೭೦ರ ಸಮಯದಲ್ಲಿ ಸಾಹಿತ್ಶ ಆಕಾಡೆಮಿಯ ಗ್ರಂಥ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ ಹಾಗೇ ಇವರು ಕನ್ನಡ ಸಾಹಿತ್ಶ ಪರಿಷತ್‌ನ ಅಧ್ಶಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಶ ಲೋಕಕ್ಕೆ ಇವರ ಕೊಡುಗೆ ಸಾಧನೆ ಅಪಾರ ಎಂದು ನುಡಿದರು.
ಭಾರತೀಯ ದಲಿತ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ದಲಿತ ನಾರಾಯಣಸ್ವಾಮಿ ಮಾತನಾಡಿ, ಚಂದ್ರಶೇಖರ ಪಾಟೀಲರು ಕನ್ನಡದ ಸಾಹಿತಿಗಳು ಕನ್ನಡ ಸಾಹಿತ್ಶ ಪ್ರಪಂಚದಲ್ಲಿ ಕನ್ನಡಕ್ಕಾಗಿ ದುಡಿದು ತಮ್ಮ ಕೊನೆಯ ಉಸಿರು ಇರುವವರೆಗೂ ಕನ್ನಡ ಕನ್ನಡ ಕನ್ನಡ ಎಂದು ಕೂಗಿ ಜಗತ್ತಿಗೇ ಸಾರಿದವರು. ಇವತ್ತಿನ ದಿನ ಇವರು ನಮ್ಮನ ಆಗಲಿದ್ದಾರೆ ಅವರ ನೆನಪಿಗಾಗಿ ನಗರದಲ್ಲಿ ಒಂದು ಪುತ್ಥಳಿ ನಿರ್ಮಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಸಿಂU ಕೀಲುಕೋಟೆ ಆಂಜಿನಪ್ಪ, ಗಾಂಧಿನಗರ ರಾಜಣ್ಣ, ಶ್ರೀನಿವಾಸ ಶೆಟ್ಟಿ, ಎಂ.ಜಿ.ಮಂಜು, ಪ್ರಕಾಶ್, ಅಮರನಾಥ್, ಶೇಖರ್ ಉಪಸ್ಥಿತರಿದ್ದರು.