10/01/2022 ಸೋಮವಾರ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಾದ ಬಾಲರಾಜ್ ಅರಸ ರಸ್ತೆ, ಹಾಗೂ ಗೋಪಿ ವೃತ್ತದ ದುರ್ಗಿಗುಡಿಯ ಬೀದಿ ಬದಿಯ ವ್ಯಾಪಾರಿಗಳು ಹಾಗೂ ರಾಘವೇಂದ್ರ ದೇವಾಲಯ, ಸುರಭಿ ಹೋಟೆಲ್ ಬಳಿಯ ವ್ಯಾಪಾರಿಗಳು ಹಾಗೂ ಕುವೆಂಪು ರಸ್ತೆಯ ಬೀದಿ ಬದಿ ವ್ಯಾಪಾರಿಗಳನ್ನು ಹಾಗೂ ಬಿ.ಹೆಚ್.ರಸ್ತೆಯ ಬಸ್ಟಾಂಡ್, ಮೆಗ್ಗಾನ್ ಆಸ್ಪತ್ರೆ, ಸಿಮ್ಸ್ ಆಸ್ಪತ್ರೆಯ ಮುಂಭಾಗದ ಗುರುತಿನ ಚೀಟಿ ಪಡೆದ ವ್ಯಾಪಾರಿಗಳು.
ಜಿಲ್ಲಾರಕ್ಷಣಾಧಿಕಾರಿಗಳ ಕಛೇರಿಯ ಮುಂಭಾಗದ ವ್ಯಾಪಾರಿಗಳು ಪ್ರವಾಸಿ ಮಂದಿರದ ಹತ್ತಿರದ ಬೀದಿ ಬದಿಯ ವ್ಯಾಪಾರಿಗಳು ಭಾರ್ಗವಿ ಪೆಟ್ರೋಲ್ ಬಂಕ್ ಪಕ್ಕ ಮತ್ತು ಮುಂಭಾಗದ ಎಪಿಎಂಸಿಯ ಬಳಿಯ ವ್ಯಾಪಾರಿಗಳು ಹಾಗೂ ಗೋಪಾಳ ಆಲ್ಕೋಳ ಸರ್ಕಲ್ ಬಳಿಯ ಬೀದಿ ಬದಿಯ ವ್ಯಾಪಾರಿಗಳ ವ್ಯಾಪಾರ ಮಾಡಲು ವಿವಿಧ ಬಡಾವಣೆಗಳ ನೂರು ಮೀಟರ್ ಸಮೀಪದ ಒಳಗೆ ಬೀದಿ ಬದಿಯ ವ್ಯಾಪಾರಿಗಳಿಗೆ ಸ್ಥಳಾಂತರಿ ಹಾಗೂ ಬೀದಿ ಬದಿಯ ವ್ಯಾಪಾರ (ಸೂಪರ್ ಮಾರ್ಕೆಟ್) ವಲಯ ಮಾಡುವ ಸಂಬಂಧ ಸ್ಮಾರ್ಟ್ ಸಿಟಿ ಪಾಲಿಕೆ ಆಭಿಯಂತರೊಂದಿಗೆ ಸ್ಥಳ ಗುರುತಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ, ಸಮುದಾಯ ವ್ಯವಾಹರಿಕ ಅಧಿಕಾರಿಗಳಾದ ಶ್ರೀಮತಿ ಅನುಪಮಾ ಟಿಆರ್. ಶ್ರೀ ಲೋಕೆಶಪ್ಪ, ಶ್ರೀ ರತ್ನಾಕರ್ ಹಾಗೂ ಇತರರೂ ಉಪಸ್ಥಿತರಿದ್ದರು.