ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ಪತ್ರಿಕಾಗೋಷ್ಠಿ ನಡೆಸಿದ್ದು , ಮೇಕೆದಾಟು ಪಾದಯಾತ್ರೆಗೆ ಶಿವಮೊಗ್ಗದಿಂದ ಭಾಗವಹಿಸುವ ಬಗ್ಗೆ ಹಾಗು ಜಿಲ್ಲಾ ಮಂತ್ರಿಗಳಾದ ಈಶ್ವರಪ್ಪನವರು ಪ್ರತಿಷ್ಠೆಗಾಗಿ ಬೇಜವಾಬ್ಧಾರಿಯಿಂದ ಜಿಲ್ಲೆಯಲ್ಲಿ ಕೊರೊನ 400 ರ ಗಡಿ ದಾಟಿದೆ ಆದಷ್ಟು ಬೇಗ ಕರೋನವನ್ನು ಹಿಡಿತಕ್ಕೆ ತರಲು ಮುಂಜಾಗ್ರತೆಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಮಂತ್ರಿಗಳು , ಜಿಲ್ಲಾಧಿಕಾರಿಗಳು , ಆರೋಗ್ಯಾಧಿಕಾರಿಗಳು ಹಾಗು ಸಂಬಂಧಪಟ್ಟವರಿಗೆ ತಾಕೀತು ಮಾಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಮೇಗೌಡರು , ಆಡಳಿತ ಉಸ್ತುವಾರಿ ಚಂದ್ರಬೋಪಾಲ್ ,ಮಹಾನಗರ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ , ರೇಖಾ ರಂಗನಾಥ್ , ಮೆಹಕ್ ಷರೀಫ್ , ರಾಜ್ಯ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷರಾದ ಸೌಗಂಧಿಕಾ ರಘುನಾಥ್ , ಜಿಲ್ಲಾ ಪದಾಧಿಕಾರಿಗಳ ವೈ ಹೆಚ್ ನಾಗರಾಜ್ , ಚಂದ್ರಶೇಖರ್ , ಮಾರ್ಟಿಸ್ , ಶಿವಲಿಂಗಮೂರ್ತಿ ಉಪಸ್ಥಿತರಿದ್ದರು .

ವರದಿ ಮಂಜುನಾಥ್ ಶೆಟ್ಟಿ…