ವಿಶ್ವದಲ್ಲಿ ಬಡತನ ತಾಂಡವ ವಾಡುತ್ತಿದೆ. ಅದನ್ನು ಹೋಗಲಾಡಿಸುವ ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಗೂ ಇರಲೇ ಬೇಕು ಎಂದು ಯೂತ್ ಹಾಸ್ಟೇಲ್ಸ್ ನ ಶಿವಮೊಗ್ಗ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿದ ರಾಷ್ಟ್ರೀಯ ಛೇರ್ಮನ್ ವೆಂಕಟನಾರಾಯಣ್ ಮಾತನಾಡುತ್ತಿದ್ದರು.
ಚಾರಣವನ್ನು ಮಾಡಿಸುವುದಷ್ಟೆ ಯೂತ್ ಹಾಸ್ಟೇಲ್ಸ್ ದೇಯವಲ್ಲ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಒಂದು ದಿನವಾದರೂ ಎಲ್ಲಾ ಮಕ್ಕಳು ಹಸಿವಿಲ್ಲದೆ ಸುಖ ನಿದ್ರೆ ಇಂದ ಇರಬೇಕು ಎಂಬ ಕಾರ್ಯಕ್ರಮದಡಿ ಎಲ್ಲಾ ರಾಷ್ಟ್ರಗಳು ಕೈ ಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿವೆ. ಅದೇ ರೀತಿ ಕಳೆದ ಜನವರಿ ಹನ್ನೆರಡರಂದು ವಿಶ್ವ ಯುವ ದಿನೋತ್ಸವದ ಪ್ರಯುಕ್ತ ರಕ್ತದಾನ ಏರ್ಪಡಿಸಿ ಭಾರತದಲ್ಲಿ ಒಂದೇದಿನ ಏಳುಸಾವಿರಕ್ಕಿಂತ ಹೆಚ್ಚು ರಕ್ತದ ಯುನಿಟ್ ಸಂಗ್ರಹ ಮಾಡಿ ದಾಖಲೆಯಾಗಿದೆ. ಇದೇ ರೀತಿ ಸಮಾಜಿಕ ಏಳಿಗೆಗೆ ಎಲ್ಲರೂ ಶ್ರಮಿಸುವಂತಹ ಕಾರ್ಯ ಮಾಡುವುದರಿಂದ ವಿಶ್ವ ಶಾಂತಿಯ ನಡೆಗೆ ತೆರಳುವುದು ಮೂಲ ಉದ್ದೇಶ.
ಭಾರತದಲ್ಲಿ ದಾಖಲೆಯ ಹನ್ನೆರಡು ಲಕ್ಷ ಅಜೀವ ಸದಸ್ಯರಿರುವ ಸಂಸ್ಥೆ ನಮ್ಮದು. ಇನ್ನೂ ಹೆಚ್ಚಿನ ಸಂಖ್ಯೆರಲ್ಲಿ ಸದಸ್ಯತ್ವ ಹೊಂದುವ ಕಾರ್ಯ ಬರದಿಂದ ಸಾಗಿದೆ. ಅದಕ್ಕೆ ತಮ್ಮವರೇ ಆದ ಹಿರಿಯರಾದ ಭರದ್ವಾಜ್ ರಂತವರ ಶ್ರಮ ಬಹಳವಿದೆ. ಅದನ್ನು ಉಳಿಸುವ ಜವಾಬ್ದಾರಿ ತಮ್ಮೆಲ್ಲರದು ಎಂದು ಕಿವಿ ಮಾತು ಹೇಳಿದರು.
ಹೆಚ್ಚು ಸದಸ್ಯರನ್ನು ನೊಂದಾಯಿಸುವುದು, ಅತೀ ಹೆಚ್ಚು ಕಾರ್ಯ ಚಟುವಟಿಕೆ ರೂಪಿಸುವುದು, ಸಾಮಾಜಿಕ ಕಾಳಜಿ ತೋರಿಸುವುದು ಎಲ್ಲ ಘಟಕಗಳ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಘಟಕದ ಛೇರ್ಮನ್ ಪ್ರಸನ್ನಕುಮಾರ್ ರವರು ಸಂತೋಷದ ಜೀವನ ಆರೋಗ್ಯವಂತರನ್ನಾಗಿ ಮಾಡುತ್ತದೆ. ಆ ನಿಟ್ಟಿನಲ್ಲಿ ನಮ್ಮ ರಾಜ್ಯ ಘಟಕ ಹಾಗೂ ಉಳಿದ ಘಟಕಗಳು ಕೈ ಜೋಡಿಸಿವೆ. ಮಂಗಳೂರು ಮತ್ತು ತರುಣೋದಯ ಘಟಕಗಳು ಕಾಡಿನಲ್ಲಿ ವಾಸಿಸುವ ಆದಿವಾಸಿಗಳಿಗೆ, ಅರಣ್ಯ ಇಲಾಖೆ ಸಿಬ್ಬಂದಿಗೆ ಆರೋಗ್ಯ ಶಿಬಿರ ಏರ್ಪಡಿಸಿ, ಕಡು ಬಡತನದಿಂದ ನಗರದ ಆರೋಗ್ಯ ಕೇಂದ್ರಕ್ಕು ಬರಲಾಗದವರಿಗೆ ಅವರ ಮನೆ ಬಾಗಿಲಿನಲ್ಲಿ ಔಷದೋಪಚಾರ ಮಾಡುವುದರಿಂದ ಅವರ ಧನ್ಯತಾ ಭಾವಕ್ಕೆ ಬೆಲೆ ಕಟ್ಟಲು ಸಾದ್ಯವೆ? ಅದೇ ನಮ್ಮ ಜೀವನದ ಸಾರ್ಥಕತೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ವಾಗೇಶ್ ಮಾತನಾಡುತಾ ನಮ್ಮ ರಾಷ್ಟ್ರೀಯ ಘಟಕದ ಸೂಚನೆಯಂತೆ ಸಾಮಾಜಿಕ ಕಾರ್ಯಕ್ರಮ ಆಯೋಜಿಸಲು ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ನಮ್ಮ ಸದಸ್ಯರ ಸಹಾಯದಿಂದ ಗಂಜಿ ಕೇಂದ್ರಗಳಿಗೆ ಆಹಾರ, ಔಷದಿ, ಬಟ್ಟಿ ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ಸ್ಥಳಿಯ ಆಡಳಿತದೊಂದಿಗೆ ಕೈಜೋಡಿಸಿ ನೀಡಿರುತ್ತೇವೆ. ಕರೋನ ಸಂದರ್ಭದಲ್ಲಿಯೂ ವಾರಿಯರ್ಸ್ ರವರಿಗೆ ಹಾಗೂ ಪೀಡಿತರಿಗೆ ದವಸ ಧಾನ್ಯಗಳ ಕಿಟ್ ವಿತ್ತರಿಸಿದ್ದೇವೆ, ಮೆಗಾನ್ ಆಸ್ವತ್ರೆಗೆ ಮುವತ್ತೈದು ಆಕ್ಸೀಜನ್ ಮೀಟರ್ ಹೀಗೆ ಸಮಯಕ್ಕೆ ಸರಿಯಾಗಿ ಸ್ವಂದಿಸಿ ಸಾಮಾಜಿಕ ಕಾರ್ಯ ಗಳಲ್ಲಿ ತೊಡಗಿಸಿ ಕೊಳ್ಳುವುದರೊಂದಿಗೆ, ಚಾರಣಿಗರಿಗೆ ಸಂತೋಷ ತರುವಂತಹ ಪ್ರವಾಸ ಮತ್ತು ಚಾರಣಗಳನ್ನು ಆಗಿಂದಾಗೆ ಆಯೋಜಿಸಿ ಯಶಸ್ವಿಯಾಗಿದ್ದೇವೆ ಎಂದರು.
ರಾಘವೇಂದ್ರರವರ ಪ್ರಾರ್ಥನೆ, ಸುರೇಶ್ ಕುಮಾರ್ ಸ್ವಾಗತಿಸಿ, ಆ.ನಾ.ವಿಜಯೇಂದ್ರ ಪ್ರಾಸ್ತಾವಿಕ ನುಡಿ ನುಡಿದರು, ವೇಣುಗೋಪಾಲ್ ವಂದಿಸಿ, ಪ್ರಕೃತಿ ಮಂಚಾಲೆ ನಿರೂಪಿಸಿದರು.