ಕ್ರೈಂ ನ್ಯೂಸ್…

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ವಾಸಿಯೊಬ್ಬರಿಗೆ ದೂರವಾಣಿ ಮುಖಾಂತರ ತಮ್ಮನ್ನು ರಘು ಮತ್ತು ಕೃಷ್ಣಪ್ಪ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಗಳು ನಮ್ಮ ಗ್ರಾಮದ ಪರಿಚಯಸ್ಥರೊಬ್ಬರು ತಮ್ಮ ಮನೆಯ ಪಾಯವನ್ನು ತೆಗೆಯುವ ಸಮಯದಲ್ಲಿ ಬಂಗಾರದ ನಾಣ್ಯಗಳು ದೊರೆತಿದ್ದು, ಅವರಿಗೆ ತುರ್ತು ಹಣದ ಅವಶ್ಯಕತೆ ಇರುವುದರಿಂದ ನಿಮಗೆ ಕಡಿಮೆ ಬೆಲೆಗೆ ಆ ಬಂಗಾರದ ನಾಣ್ಯಗಳನ್ನು ಕೊಡಿಸುತ್ತೇನೆಂದು ನಂಬಿಸಿ, ದಿನಾಂಕಃ-04-01-2022 ರಂದು ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಆನವಟ್ಟಿ ಬಸ್ ಸ್ಟ್ಯಾಂಡ್ ಹತ್ತಿರ ಬನ್ನಿ ನಿಮಗೆ ಬಂಗಾರ ನಾಣ್ಯಗಳನ್ನು ಕೊಡುತ್ತೇವೆಂದು ಕರೆದು ಬಂಗಾರದ ನಾಣ್ಯಗಳೆಂದು ಹೇಳಿ ½ ತೂಕದ ನಾಣ್ಯಗಳನ್ನು ಕೊಟ್ಟು ರೂ 5,00,000/- ಗಳನ್ನು ಪಡೆದುಕೊಂಡಿರುತ್ತಾರೆ.

ನಂತರ ಸದರಿ ನಾಣ್ಯಗಳನ್ನು ಪರೀಕ್ಷೆ ಮಾಡಿಸಿದಾಗ ಅವರು ನಮಗೆ ನಕಲಿ ನಾಣ್ಯಗಳನ್ನು ನೀಡಿ ಮೋಸ ಮಾಡಿರುವುದು ತಿಳಿದುಬಂದಿರುತ್ತದೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆಃ-0006/2022 ಕಲಂ 420 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಪಿಎಸ್ಐ ಆನವಟ್ಟಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ದಿನಾಂಕಃ-17-01-2022 ರಂದು ಪ್ರಕರಣದ ಆರೋಪಿಗಳಾದ ಕೆ ರಾಮಪ್ಪ, 44 ವರ್ಷ, ತಿಮ್ಲಾಪುರ ಗ್ರಾಮ, ಆನವಟ್ಟಿ ಮತ್ತು ತಿಮ್ಮಪ್ಪ, 65 ವರ್ಷ, ಬನ್ನೂರು ಗ್ರಾಮ ಶಿಕಾರಿಪುರರವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ರೂ 4,22,000/- ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ…