ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ.(ರಿ)
ಶಿವಮೊಗ್ಗ ನಗರದಲ್ಲಿರುವ ಬೊಮ್ಮನಕಟ್ಟೆ ಯ ಆಶ್ರಯ ಬಡಾವಣೆ ಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸಂಬಂಧಿಸಿದಂತೆ ಹತ್ತು ಹಲವಾರು ಸಮಸ್ಯೆಗಳನ್ನು ಬಹಳಷ್ಟು ತಿಂಗಳಿನಿಂದ ಅಲ್ಲಿನ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.
ಕುಡಿಯಲು ಶುದ್ಧೀಕರಣದ ನೀರಿಲ್ಲ ಹಾಗೂ ಸ್ನಾನದ ಕೊಠಡಿಯ ಬಾಗಿಲುಗಳು ಮುರಿದಿದ್ದು ಲಾಕ್ ಇರುವುದಿಲ್ಲ ಬಿಸಿ ನೀರಿನ ಸಮಸ್ಯೆ ಹಾಗೂ ಅಲ್ಲಿನ ಅಡುಗೆಯೂ ರುಚಿಕರ ವಾಗಿರುವುದಿಲ್ಲ ಸಾಂಬಾರ್ ನೀರಿನಂತಿರುತ್ತದೆ ವಿದ್ಯಾರ್ಥಿ ನಿಲಯದ ಸುತ್ತ ಮುತ್ತಲಿನ ಪರಿಸರವು ಕಸದಿಂದ ತುಂಬಿರುತ್ತದೆ ಕೆಲವೊಂದು ಕೊಠಡಿಯ ಗಾಜುಗಳು ಒಡೆದಿವೆ ಮತ್ತು ಫ್ಯಾನ್ ಇಲ್ಲ ಬಿಡ್ ಗಳು ಸರಿಯಿಲ್ಲ ಸ್ನಾನದ ಕೊಠಡಿಯ ಲೈಟ್ ಕೆಲವೊಂದು ಕೊಠಡಿಗೆ ಇರುವುದಿಲ್ಲ ಇದೇ ರೀತಿಯ ಇನ್ನೂ ಹೆಚ್ಚು ಹಲವು ಸಮಸ್ಯೆಗಳು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.
ಈ ಸಮಸ್ಯೆಯನ್ನು ಕುರಿತು ವಿದ್ಯಾರ್ಥಿ ನಿಲಯದ ವಾರ್ಡನ್ ಗೆ ಹಲವು ಬಾರಿ ವಿದ್ಯಾರ್ಥಿಗಳು ಮನವಿ ನೀಡಿರುತ್ತಾರೆ ಮತ್ತು ವಾರ್ಡನ್ ನ ಗಮನಕ್ಕೆ ತಂದಿರುತ್ತಾರೆ ಆದರೂ ಈ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ವಿದ್ಯಾರ್ಥಿಗಳು ಕರೆ ಮಾಡಿ ವಿಷಯವನ್ನು ತಿಳಿಸಿದರು, ನಾನು ಈ ವಿಷಯ ಅರಿತ ಜಿಲ್ಲಾಧ್ಯಕ್ಷರುಗಳಾದ ಶ್ರೀಯುತ ಶ್ರೀ ಆಂಜನೇಯರವರ ಗಮನಕ್ಕೆ ತಂದು ಅವರ ಮಾರ್ಗದರ್ಶನದೊಂದಿಗೆ ಸ್ಥಳಕ್ಕೆ ಹೋಗಿ ಅಲ್ಲಿನ ವಿದ್ಯಾರ್ಥಿಗಳಿಂದ ಮನವಿ ಪತ್ರವನ್ನು ಪಡೆದು ವಿದ್ಯಾರ್ಥಿನಿಲಯದ ದಾಸ್ತಾನು ಹಾಗೂ ಅಡುಗೆ ಕೊಠಡಿಗೆ ಭೇಟಿ ನೀಡಿ ಅಲ್ಲಿನ ತಿಂಡಿಯನ್ನು ನಾನು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ಎಂ.ಪಿ ರುಚಿಯನ್ನು ಪರೀಕ್ಷಿಸಿ ವಿದ್ಯಾರ್ಥಿಗಳೊಂದಿಗೆ ತಿಂಡಿಯನ್ನು ಮಾಡಿದೆವು ಹಾಗೂ ಅಲ್ಲಿಂದಲೇ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಂಬಂಧಪಟ್ಟ ವಿದ್ಯಾರ್ಥಿನಿಲಯದ ವಾರ್ಡನ್ ಕೊಟ್ರೇಶ್ ಅವರಿಗೆ ಕರೆ ಮಾಡಿ ಸಮಸ್ಯೆಗಳ ಬಗ್ಗೆ ತಿಳಿಸಿದೆನು,ಕೂಡಲೇ ಈ ಸಮಸ್ಯೆಯನ್ನು ನೀವು ಬಗೆಹರಿಸದಿದ್ದಲ್ಲಿ, ಸಮಾಜ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿ ನಿಮ್ಮ ಮೇಲೆ ಕಾನೂನು ಮೂಲಕ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆವು.
ನಂತರ ನಮ್ಮ ಈ ಕರೆಗೆ ಓಗೊಟ್ಟು ವಾರ್ಡನ್ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ನಮ್ಮ ವಿದ್ಯಾರ್ಥಿಗಳು ಕರೆ ಮಾಡಿ ಧನ್ಯವಾದ ತಿಳಿಸಿದರು.