ಶಿವಮೊಗ್ಗ: ಮಹಾನಗರ ಪಾಲಿಕೆ ಆಯುಕ್ತ ಹಾಗೂ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಅವರಿಗೆ ಶಿವಮೊಗ್ಗದ ರೋರ‍್ಸ್ ಕ್ಲಬ್ ಪದಾಧಿಕಾರಿಗಳು ಸನ್ಮಾನಿಸಿದರು.

ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ತ್ವರಿತಗತಿಯಿಂದ, ವೇಗವಾಗಿ ಹಾಗೂ ನಡೆಯುತ್ತಿರುವ ಸಂದರ್ಭದಲ್ಲಿ ಶಿವಮೊಗ್ಗ ನಗರದ ಕೇಂದ್ರ ಗ್ರಂಥಾಲಕ ಹಾಗೂ ಸರ್ ಎಂ.ವಿ. ರಸ್ತೆ, ಕೆ.ಟಿ.ಶಾಮಯ್ಯ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆಗೆ ಬಂದ ಸಂದರ್ಭದಲ್ಲಿ ರೋರ‍್ಸ್ ಕ್ಲಬ್ ಆಡಳಿತ ಮಂಡಳಿಯಿAದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮಾತನಾಡಿ, ರೋರ‍್ಸ್ ಕ್ಲಬ್ ನಗರದಲ್ಲಿ 50 ವರ್ಷಗಳಿಗೂ ಹೆಚ್ಚಿನ ಸಮಯ ಕೌಟುಂಬಿಕ ಕ್ಲಬ್ ಆಗಿ ಸಾಮಾಜಿಕವಾಗಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ನೆರೆ ಹಾವಳಿ, ಕೋವಿಡ್ ಹಾಗೂ ಅನೇಕ ಸಂದರ್ಭಗಳಲ್ಲಿ ನೆರವಿನ ಕಾರ್ಯಕ್ರಮಗಳನ್ನು ನಡೆಸಿದೆ. ಸಮಾಜದ ಸಾಧಕರಿಗೂ ಗೌರವಿಸುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.

ರೋವರ್ಸ್ ಕ್ಲಬ್ ಅಧ್ಯಕ್ಷ ಕೆ.ಸಿ.ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾನಗರ ಪಾಲಿಕೆ ಉಪಮೇಯರ್ ಶಂಕರ್ ಗನ್ನಿ, ಕ್ಲಬ್ ಉಪಾಧ್ಯಕ್ಷ ಕೆ.ರವಿ, ಕಾರ್ಯದರ್ಶಿ ಎಸ್.ದತ್ತಾತ್ರಿ, ಖಜಾಂಚಿ ನಾಗರಾಜ ಪಾಟಕರ್, ಸಹಕಾರ್ಯದರ್ಶಿ ಕಿಟ್ಟಣ್ಣ, ನಿರ್ದೇಶಕರಾದ ಜಿ.ವಿಜಯ್‌ಕುಮಾರ್, ಶ್ರೀರಾಮ್, ಅ.ಮ.ಪ್ರಕಾಶ್, ಗೋವಿಂದರಾಜ್, ವಿನಾಯಕ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…