ಶಿವಮೊಗ್ಗ :- ಜಿಲ್ಲೆಗ ಬಂದಾಗಿ ನಿಂದ ಪ್ರಕೃತಿ ವಿಕೋಪ, ಕೊರೋನಾ ಸೋಂಕು ಹರಡುವಿಕೆ, ನಗರದ ಅಭಿವೃದ್ದಿ ಕಾಮಗಾರಿಗಳ ವಿಕ್ಷಣೆ, ಕೋವಿಡ್ ಹೆಲ್ಪ್ಲೈನ್ ವ್ಯವಸ್ಥೆ, ವ್ಯಾಕ್ಸಿನೇಷನ್ ನಿರ್ವಹಣೆ, ಸಾಮಾಜಿಕವಾಗಿ ಜಿಲ್ಲೆಯ ಹಲವಾರು ಸವಾಲುಗಳನ್ನು ಎದುರಿಸ ಬೇಕಾಯಿತು. ಆದರೆ ಶಿವಮೊಗ್ಗದ ಜನತೆ ನನ್ನನ್ನು ಆತ್ಮೀಯವಾಗಿ ನೋಡಿಕೊಂಡು ಸಹಕರಿಸಿದರು ಎಂದು ನಿರ್ಗಮಿತ ಜಿಲ್ಲಾಧಿಕಾರಿ ಶಿವಕುಮಾರ್ ಕೃತಜ್ಞತೆ ಸಲ್ಲಿಸಿದರು.

ಇಂದು ಜಿಲ್ಲಾ ವಾಣಿಜ್ಯ ಸಂಘದ ಆವರಣದಲ್ಲಿ ಆಯೋಜಿಸಿದ್ದ ಬೀಳ್ಕೊ ಡುಗೆ ಸಮಾರಂಭದಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಅವರು ಮಾತನಾಡಿ, ನಾನು ನನ್ನ ಅಧಿಕಾಲಾವಧಿಯಲ್ಲಿ ಸಲ್ಲಿಸಿದ ಸೇವೆಗಳು ತೃಪ್ತಿ ತಂದಿದೆ. ವಾಣಿಜ್ಯ ಸಂಘ ಹಾಗೂ ಸಂಘದ ಸಂಯೋಜಿತ ಸಂಘಗಳು ಎಲ್ಲಾ ರೀತಿಯ ಸಲಹೆ- ಸಹಕಾರ ನೀಡಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು ಎಂದು ತಿಳಿಸಿದರು.

ನಿಕಟಪೂರ್ವ ಅಧ್ಯಕ್ಷ ಜೆ.ಆರ್. ವಾಸುದೇವರವರು ಮಾತನಾಡಿ ಜಿಲ್ಲಾಧಿಕಾರಿ ಅವರು ದೇವಕಾತಿಕೊಪ್ಪ ಕೈಗಾರಿಕಾ ವಲಯ, ಸಾಗರ ರಸ್ತೆ ಕೈಗಾರಿಕಾ ವಲಯದ ಸಮಸ್ಯೆಗಳಿಗೆ, ಕೋವಿಡ್ ಸಂದರ್ಭ ಬಡ ಜನತೆಗೆ, ಕೋವಿಡ್-ಕಿಟ್ ಔಷದಿ ವಿತರಣೆ, ಕೂಲಿಕಾರ್ಮಿಕರಿಗೆ ಫುಡ್‌ಕಿಟ್ ವಿತರಣೆ, ನೆರೆಹಾವಳಿ ಸಂದರ್ಭದಲ್ಲಿ ನೊಂದ ಉದ್ಯಮಿಗಳಿಗೆ ಸರ್ಕಾರ ನೆರೆಪರಿಹಾರ ನೀಡುವ, ಸ್ಮಾರ್ಟ್- ಸಿಟಿ ಕಾಮಗಾರಿಗಳ ಪರಿವಿಕ್ಷಣೆ ಮುಂತಾದ ಸಮಯದಲ್ಲಿ ತುಂಬಾ ವ್ಯವಸ್ಥಿ÷್ಥತವಾಗಿ ವಿಕ್ಷಣೆ- ಪರಿಹಾರ ಕಾರ್ಯಗಳನ್ನು ನಿರ್ವಹಿ ಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.


ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಮಾತನಾಡಿ ಸುಮಾರು ಎರಡುವರೆ ವರ್ಷಗಳಿಂದ ಕೊರೋನಾ ಸಂಕಷ್ಟದ ಸಮಯದಲ್ಲಿ ಜಿಲ್ಲಾಧಿಕಾರಿಗಳಾಗಿ ಆಗಮಿಸಿದ ಕೆ.ಬಿ. ಶಿವಕುಮಾರ್‌ರವರು ಜಿಲ್ಲೆಗೆ ಉತ್ತಮ ಆಡಳಿತ ನೀಡಿದ್ದಾರೆ. ನಮ್ಮ ಸಂಘ ದಿಂದ ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಸಂಬAಧಿಸಿದAತೆ, ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಲವು ಬೇಡಿಕೆ ಗಳನ್ನು ತೆಗೆದುಕೊಂಡು ಹೋದಾಗ ಅವುಗಳಿಗೆ ಪೂರಕವಾಗಿ ಸ್ಪಂದಿಸಿರುತ್ತಾರೆ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಅನೇಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯಚಟುವಟಿಕೆಗಳನ್ನು ಯೋಜಿಸಿ ಮಾದರಿಯಾಗಿದ್ದಾರೆ ಶಿವಮೊಗ್ಗನಗರಕ್ಕೆ ಅವರ ಸೇವಾವಧಿಯಲ್ಲಿ ಮತ್ತೊಮ್ಮೆ ಜಿಲ್ಲಾಧಿಕಾರಿಗಳಾಗಿ ಬರಲಿ ಎಂದು ಹಾರೈಸಿದರು.

ಉಪಾಧ್ಯಕ್ಷ ಬಿ. ಗೋಪಿನಾಥ್, ಕರ‍್ಯದರ್ಶಿ, ವಸಂತ್ ಹೋಬಳಿ ದಾರ್, ಸಹ ಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕ ಎಸ್.ಎಸ್. ಉದಯಕುಮಾರ್, ಎಂ. ರಾಜು, ಕೆ.ಎಸ್. ಸುಕುಮಾರ್, ಜಗದೀಶ್ ಮಾತನವರ್, ಇ. ಪರಮೇಶ್ವರ, ಪ್ರದೀಪ್ ವಿ. ಎಲಿ, ಬಿ. ಮಂಜೇಗೌಡ, ಮರಿಸ್ವಾಮಿ, ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…